ನೀವು ಯಾವ ಉಪ ಲೋಕಾಯುಕ್ತರ ವ್ಯಾಪ್ತಿಗೆ ಬರುತ್ತೀರಿ?

ಬೆಂಗಳೂರು, ಆಗಸ್ಟ್ 7: ಕರ್ನಾಟಕ ಲೋಕಾಯುಕ್ತ ಇಬ್ಭಾಗವಾಗಿದೆ. ಆತಂಕಪಡಬೇಕಿಲ್ಲ ಏನಪಾ ಹೊಸಬರು ಬಂದ ತಕ್ಷಣ ಇಂಥ ಕೆಲಸ ಮಾಡಿದರಾ? ಎಂದು ಗಾಬರಿ ಪಡಬೇಡಿ. ಇಲ್ಲಿ ಅಧಿಕಾರ ವ್ಯಾಪ್ತಿ ಬೇರ್ಪಟ್ಟಿದೆ. ಇದು ಆಡಳಿತ ಸುಧಾರಣೆ ದೃಷ್ಟಿಯಿಂದ ಅಷ್ಟೆ. ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಎಸ್ ಬಿ ಮಜಗೆ ಮತ್ತು ನ್ಯಾಯಮೂರ್ತಿ ಆರ್ ಗುರುರಾಜನ್ ಅವರಿಗೆ ಕರ್ತವ್ಯ ವ್ಯಾಪ್ತಿ ನಿಗದಿಪಡಿಸಿ ಲೋಕಾಯುಕ್ತ ನ್ಯಾಯಮೂರ್ತಿ ಶಿವರಾಜ್ ವಿ.ಪಾಟೀಲ್ ಅವರು ಈ ಆದೇಶ ಹೊರಡಿಸಿದ್ದಾರೆ.

ನ್ಯಾ. ಮಜಗೆ (ಉಪ ಲೋಕಾಯುಕ್ತ-1) ಅವರಿಗೆ 13 ಜಿಲ್ಲೆಗಳ ವ್ಯಾಪ್ತಿಯನ್ನು ನೀಡಿದ್ದರೆ, ನ್ಯಾ. ಗುರುರಾಜನ್ (ಉಪ ಲೋಕಾಯುಕ್ತ-2) 17 ಜಿಲ್ಲೆಗಳ ವ್ಯಾಪ್ತಿಯನ್ನು ನಿಗದಿಪಡಿಸಲಾಗಿದೆ. ಆಯಾ ವ್ಯಾಪ್ತಿಯಲ್ಲಿನ ಅಧಿಕಾರಿಗಳ ವಿರುದ್ಧ ದೂರು ನೀಡುವ ಸಾರ್ವಜನಿಕರು ಆಯಾ ಜಿಲ್ಲೆಗಳ ವ್ಯಾಪ್ತಿ ಹೊಂದಿರುವವರಿಗೇ ಸಲ್ಲಿಸಬೇಕು. ಸ್ವಯಂಪ್ರೇರಿತ ವಿಚಾರಣೆಯನ್ನು ಕೈಗೆತ್ತಿಕೊಳ್ಳುವ ಸಂದರ್ಭದಲ್ಲೂ ಉಪ ಲೋಕಾಯುಕ್ತರು ಇದೇ ನಿಯಮ ಪಾಲಿಸಬೇಕಾಗುತ್ತದೆ.

ಮಜಗೆ ಅವರ ವ್ಯಾಪ್ತಿ ಪ್ರದೇಶಗಳು: ಬೆಂಗಳೂರು ನಗರ, ಗುಲ್ಬರ್ಗ, ಕೊಪ್ಪಳ, ರಾಯಚೂರು, ಯಾದಗಿರಿ, ಬೀದರ್, ಉತ್ತರ ಕನ್ನಡ, ಬಾಗಲಕೋಟೆ, ಹಾವೇರಿ, ವಿಜಾಪುರ, ಧಾರವಾಡ, ಗದಗ ಮತ್ತು ಬೆಳಗಾವಿ ಜಿಲ್ಲೆ.

ಗುರುರಾಜನ್ ಮಜಗೆ ಅವರ ವ್ಯಾಪ್ತಿ ಪ್ರದೇಶಗಳು: ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಮೈಸೂರು, ರಾಮನಗರ, ಹಾಸನ, ಚಾಮರಾಜನಗರ, ಚಿಕ್ಕಮಗಳೂರು, ಬಳ್ಳಾರಿ, ಶಿವಮೊಗ್ಗ, ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+