ಸೆಲ್ವಿ ಜಯಲಲಿತಾಗೆ ಶ್ರಾವಣ ಸಂಭ್ರಮ ಬಲು ಜೋರು
ಚೆನ್ನೈ,
ಆಗಸ್ಟ್ 5: ಸೆಲ್ವಿ ಜಯಲಲಿತಾ ಶ್ರಾವಣವನ್ನು ಜೋರಾಗಿಯೇ ಆಚರಿಸುತ್ತಿದ್ದಾರೆ. ಆಶ್ಚರ್ಯವೆಂದರೆ ಇದಕ್ಕೆ ಡಿಎಂಕೆ ಕಲಿಗಳು ಸಂಪೂರ್ಣ ಸಾಥ್ ನೀಡುತ್ತಿದ್ದಾರೆ. ಡಿಎಂಕೆ ನೆಂಟರು ಬಂಟರನ್ನು ಒಬ್ಬರಾದ ಮೇಲೆ ಮತ್ತೊಬ್ಬರನ್ನು ಒಂದೇ ಸಮನೆ ಜೈಲಿಗಟ್ಟುತ್ತಾ ಸೆಲ್ವಿ ಜಯಲಲಿತಾ ಸಂಭ್ರಮಿಸುತ್ತಿದ್ದಾರೆ. ತಮಿಳುನಾಡಿನಲ್ಲಿ ಬಂಧನಗಳ ಪರ್ವ ಬರ್ಜರಿಯಾಗಿ ಮುಂದುವರಿದಿದೆ. ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಮತ್ತು ಡಿಎಂಕೆ ಮುಖಂಡ ಎನ್ ಕೆಕೆಪಿ ರಾಜಾ ಹಾಗೂ ಇತರೆ ನಾಲ್ವರನ್ನು ಗುರುವಾರ ಬಂಧಿಸಲಾಗಿದೆ. id="toptextpromo">ಭೂ
ಕಬಳಿಕೆ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾದ ಡಿಎಂಕೆ ಪಕ್ಷಕ್ಕೆ ಸೇರಿದ ಎರಡನೇ ಮುಖಂಡ ಇವರಾಗಿದ್ದು, ಜುಲೈ 30 ರಂದು ವೀರಪಾಂಡಿ ಅನ್ಬಳಗನ್ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಕೈಮಗ್ಗ ಸಚಿವರಾಗಿದ್ದ ರಾಜಾ, ಈರೋಡ್ ಮಹಾನಗರ ಪಾಲಿಕೆ ಮೇಯರ್ ಕೆ.ಕುಮಾರ ಮುರುಗೇಶ್, ಡಿಎಂಕೆ ಜಿಲ್ಲಾ ಉಪ ಕಾರ್ಯದರ್ಶಿ ಒ.ಸಿ. ವಿಶ್ವನಾಥನ್, ಇವರ ಪುತ್ರರಾದ ರಾಜೇಂದ್ರನ್ ಮತ್ತು ಸುಬ್ರಮಣಿಯಮ್ ಅವರನ್ನು ವಿಶೇಷ ಪೊಲೀಸ್ ಪಡೆ ಗುರುವಾರ ಬೆಳಿಗ್ಗೆ ವಶಕ್ಕೆ ತೆಗೆದುಕೊಂಡಿದೆ. id='are-slot-1' class='oiad oi-axt oiadv'> id='top-searched-articles'>'2007ರಲ್ಲಿ
ರಾಜಾ ಸೇರಿದಂತೆ 11 ಜನರು ತಮ್ಮ ಮನೆಗೆ ನುಗ್ಗಿ, ಥೆಂಡ್ರಾಲ್ ನಗರದಲ್ಲಿರುವ ನನಗೆ ಸೇರಿದ 60.5 ಎಕರೆ ಜಮೀನನ್ನು ಬಲವಂತವಾಗಿ ಬರೆಸಿಕೊಂಡಿದ್ದರು. ಮತ್ತು ಸುಬ್ರಮಣಿಯಮ್ ಎಂಬುವರಿಂದ ಸಾಲ ಪಡೆದು ಆತನಿಗೆ ನೀಡಿದ್ದರು. ಹಾಗೂ ನನಗೆ ಜಮೀನಿನ ಹಣ ಕೂಡ ಸಂದಾಯ ಮಾಡಿರಲಿಲ್ಲ' ಎಂದು ರಾಮಸ್ವಾಮಿ ಎಂಬುವವರು ಕೆಲವು ದಿನಗಳ ಹಿಂದೆ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಜರುಗಿಸಿದ್ದಾರೆ.











Click it and Unblock the Notifications