ಅಂಬಾನಿ ರಕ್ಷಣೆಗೆ ಸರ್ಕಾರ, ಸಿಬಿಐ ತನಿಖೆಗೆ ನಕಾರ

ವಕ್ಫ್ ಸಚಿವ ಮೊಹಮ್ಮದ್ ಆರಿಫ್ ನಸೀಮ್ ಖಾನ್ ಶಾಸನ ಸಭೆಯಲ್ಲಿ ವಿರೋಧ ಪಕ್ಷದನಾಯಕ ಎಕ್ನಾತ್ ಖಾಡ್ಸೆ ಮತ್ತು ಇತರ ಸದಸ್ಯರ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿರುವ ಅವರು, ಕೇಂದ್ರವು 2010ರ ಡಿಸೆಂಬರ್‌ನಲ್ಲಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಮಾಡಿರುವ ಪ್ರಯತ್ನವನ್ನು ಪರಿಶೀಲಿಸಲಾಗುತ್ತಿದೆ ಎಂದು
ಹೇಳಿದ್ದರು.
ಕರೀಂಭಾಯಿ ಇಬ್ರಾಹಿಂಭಾಯಿ ಖೋಜಾ(khoja) ಅನಾಥಾಲಯ ಟ್ರಸ್ಟ್ ಗೆ ಸೇರಿದ ಮುಸ್ಲಿಂ ಸಮುದಾಯದ ಮಕ್ಕಳ ವಿದ್ಯಾ ಕೇಂದ್ರ ಸ್ಥಾಪನೆಗಾಗಿ ಈ ಜಾಗ ಮೀಸಲಿಡಲಾಗಿತ್ತು . ಆದರೆ ಚಾರಿಟೇಬಲ್ ಟ್ರಸ್ಟ್ ಈ ಜಾಗವನ್ನು 2002ರ ಜುಲೈಯಲ್ಲಿ ಆಂಟಾಲಿಯ ಖಾಸಗಿ ವಾಣಿಜ್ಯ ಸಂಸ್ಥೆಗೆ 21.5 ಕೋಟಿ ರೂ ಗೆ ಮಾರಾಟ ಮಾಡಿತ್ತು. ಇದು ಮಾರುಕಟ್ಟೆ ಮೌಲ್ಯಕ್ಕಿಂತ ಅತ್ಯಂತ ಕಡಿಮೆ ಮೊತ್ತವಾಗಿತ್ತು.
ಅಂಬಾನಿಯ ಈ ಫ್ಲ್ಯಾ ಟ್ 4532 ಚದರ ಮೀಟರ್ ವಿಸ್ತೀರ್ಣವಿದೆ. ಒಟ್ಟು27 ಮಹಡಿಗಳ ಗಗನಚುಂಬಿ ಕಟ್ಟಡ ಜಗತ್ತಿನ ಅತ್ಯಂತ ದುಬಾರಿ ನಿವಾಸಗಳಲ್ಲೊಂದು ಎಂಬ ಹೆಸರು ಗಳಿಸಿದೆ. ಸುಮಾರು 500 ಕೋಟಿಗೂ ಅಧಿಕ ಬೆಲೆ ಬಾಳುತ್ತದೆ.
ಆದರೆ ವಕ್ಫ್ ಬೋರ್ಡು ಈ ಅಂಬಾನಿ ಕೈ ಸೇರಿದ ಈ ಕಟ್ಟಡ ವ್ಯವಹಾರಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ.ಕಟ್ಟಡವನ್ನು ಹಿಂತಿರುಗಿಸುವಂತೆ ನೋಟಿಸ್ ಜಾರಿ ಮಾಡಿತ್ತು. ಸಿಬಿಐ ತನಿಖೆ ಕೂಡಾ ನಡೆಯುವ ಸಾಧ್ಯತೆಯಿತ್ತು.ಆದರೆ, ಮಹಾರಾಷ್ಟ್ರ ಸರ್ಕಾರ ಸಿಬಿಐ ತನಿಖೆಯನ್ನು ತಳ್ಳಿ ಹಾಕಿದೆ.












Click it and Unblock the Notifications