ದಿಲ್ಲಿಯಲ್ಲೀಗ ಶೀಲಾ ಓ ಮೈ ಶೀಲಾ ...ಗಾನಾ ಬಜಾನ

ತಮ್ಮ ಅಧಿಕೃತ ನಿವಾಸದಲ್ಲಿ ಲೋಕೋಪಯೋಗಿ, ಸಾರಿಗೆ, ಶಿಕ್ಷಣ, ವಿದ್ಯುತ್ ಇಲಾಖೆಯ ಸಚಿವರೊಂದಿಗೆ ಚರ್ಚಿಸಿದ ಅವರು ನಂತರ ಈ ಇಲಾಖೆಗಳ ಹಿರಿಯ ಅಧಿಕಾರಿಗಳ ಜೊತೆಗೂ ಹಲವು ಸುತ್ತಿನ ಮಹತ್ವದ ಮಾತುಕತೆ ನಡೆಸಿದ್ದಾರೆ. ವಿದ್ಯುತ್ ಸ್ವಿಚ್‌ಗೇರ್ ಪೆಟ್ಟಿಗೆಗಳು ಮತ್ತು ಬೀದಿ ದೀಪಗಳ ಯೋಜನೆಯ ಗುತ್ತಿಗೆ ನೀಡಿಕೆಯನ್ನು ಅಂತಿಮಗೊಳಿಸುವಲ್ಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ತಮ್ಮ ಹುದ್ದೆಯ ಪ್ರಭಾವ ಬೀರಿದ್ದಾರೆ ಎಂದು ಸಿಎಜಿ ವರದಿಯಲ್ಲಿ ಆರೋಪಿಸಿರುವುದಾಗಿ ಹೇಳಲಾಗಿದೆ.
ಈ ಮಧ್ಯೆ, ಸಿಡಬ್ಲ್ಯೂಜಿ ಕಾಮಗಾರಿ ಗುತ್ತಿಗೆ ನೀಡಿಕೆಗಳಿಗೆ ಸಂಬಂಧಿಸಿದ ಸಿಎಜಿ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಿದ (ಶುಕ್ರವಾರ ಮಂಡಿಸುವ ಸಾಧ್ಯತೆ ಇದೆ) ನಂತರವಷ್ಟೇ ಪ್ರತಿಕ್ರಿಯೆ ನೀಡಲು ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಬಯಸಿರುವುದಾಗಿ ಮೂಲಗಳು ತಿಳಿಸಿವೆ.
ಸಂಸತ್ತಿನಲ್ಲೂ ಪ್ರತಿಧ್ವನಿ: ಕಾಮನ್‌ವೆಲ್ತ್ ಕ್ರೀಡಾಕೂಟದ (ಸಿಡಬ್ಲ್ಯೂಜಿ) ವೇಳೆ ಕಾಮಗಾರಿ ಗುತ್ತಿಗೆ ನೀಡುವಲ್ಲಿ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರು ಅಕ್ರಮ ಎಸಗಿದ್ದಾರೆ ಎಂಬ ಸಂಗತಿಯನ್ನು ರಾಜ್ಯಸಭೆಯಲ್ಲಿ ಬಿಜೆಪಿ ಮತ್ತು ಎಡಪಕ್ಷಗಳು ಪ್ರಸ್ತಾಪಿಸಿವೆ.












Click it and Unblock the Notifications