ಕ್ಯಾಪಿಟಲ್ ಹೋಟೆಲಿನಲ್ಲಿ ಬಿಜೆಪಿ ಶಾಸಕರ ಮಾರಾಮಾರಿ

Hotel Capitol Witness BJP legislatures battle
ಬೆಂಗಳೂರು, ಆಗಸ್ಟ್ 03: ಕರ್ನಾಟಕದ ನೂತನ ಮುಖ್ಯಮಂತ್ರಿ ಆಯ್ಕೆ ವಿಕೋಪಕ್ಕೆ ತಿರುಗಿದೆ. ಮುಖ್ಯಮಂತ್ರಿ ಆಯ್ಕೆ ಸಂಬಂಧ ಬೆಂಗಳೂರಿನ ಖಾಸಗಿ ಹೋಟೆಲಿನಲ್ಲಿ ಬುಧವಾರ ಮಧ್ಯಾಹ್ನ ಸಭೆ ನಡೆದಿತ್ತು. ಈ ವಿದ್ಯಮಾನಗಳಿಂದ ಸಭೆಯಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆ ಸಾಧ್ಯವಾಗಿಲ್ಲ.

ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದ ಇಬ್ಬರೂ ವೀಕ್ಷಕರು ಮುಖ್ಯಮಂತ್ರಿಗಾದಿಗಾಗಿ ಸದಾನಂದ ಗೌಡ ಮತ್ತು ಜಗದೀಶ್ ಶೆಟ್ಟರ್ ಅವರ ಹೆಸರುಗಳನ್ನು ಆಖೈರುಗೊಳಿಸಿ, ರಹಸ್ಯ ಮತದಾನಕ್ಕೆ ಆದೇಶಿಸಿದ್ದಾರೆ.

ಪ್ರಮುಖವಾಗಿ ಸದಾನಂದ ಗೌಡ, ಜಗದೀಶ್ ಶೆಟ್ಟರ್ ಮತ್ತು ಅನಂತಕುಮಾರ್ ಬಣಗಳ ಮಧ್ಯೆ ಮಾರಾಮಾರಿ ನಡೆದಿದೆ. ಗೊಂದಲಮಯ ವಾತಾವರಣದಲ್ಲಿ ಶಾಸಕರು ತಮ್ಮ ಬೆಂಬಲಿತ ಅಭ್ಯರ್ಥಿ ಮತ್ತು ನಾಯಕರ ಪರವಾಗಿ ಘೋಷಣೆಗಳನ್ನು ಕೂಗುತ್ತಿದ್ದಾರೆ. ಪಕ್ಷದ ವೀಕ್ಷಕರಾದ ಅರುಣ್ ಜೇಟ್ಲಿ ಮತ್ತು ರಾಜನಾಥ ಸಿಂಗ್ ಅವರ ಸಮ್ಮುಖದಲ್ಲಿ ಶಾಸಕರು ಮನಸೋ ಇಚ್ಛೆ ಬೈದಾಡುತ್ತಿದ್ದು, ಶೆಟ್ಟರೋ, ಗೌಡರೋ ಎಂಬ ಕೂಗಾಟ ಕೇಳಿಬರುತ್ತಿದೆ.

ಸಭೆಯಲ್ಲಿ ಒಟ್ಟು 115 ಶಾಸಕರು ಹಾಜರಿದ್ದಾರೆ. ಉಳಿದ 5 ಶಾಸಕರು ಗೈರು ಹಾಜರಾಗಿದ್ದಾರೆ. ಸಭೆ ಆರಂಭವಾಗುತ್ತಿದ್ದತೆ ವರಿಷ್ಠರ ಸೂಚನೆಯ ಮೇರೆಗೆ ಪಕ್ಷದಸಂಸದರು ಮತ್ತು ಮೇಲ್ಮನೆ ಸದಸ್ಯರನ್ನು ಹೊರಗೆ ಕಳಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+