ಸದಾನಂದ ಗೌಡ ಅವರ ಕೋಲ್ಗೇಟ್ ನಗೆ 50 ಕೋಟಿ ರು

ಮೂಲಗಳ ಪ್ರಕಾರ ಹೊಸ ಮುಖ್ಯಮಂತ್ರಿ ಸದಾನಂದಗೌಡರ ಎವರ್ ಗ್ರೀನ್ ಕೋಲ್ಗೇಟ್ ಸ್ಮೈಲ್ ಗೆ 50 ಕೋಟಿ ರು ಬೆಲೆ ಕಟ್ಟಲಾಗಿದೆ. ನೆನ್ನೆ ಸಂಜೆ ತನಕ ಜಗದೀಶ್ ಶೆಟ್ಟರ್ ಲೀಡ್ ನಲ್ಲಿದ್ದರು ಆದರೆ, ಯಾವಾಗ ಮಾಜಿ ಸಿಎಂ ಯಡಿಯೂರಪ್ಪ ಮತ್ತೆ ಅಧಿಕಾರಕ್ಕೆ ಬರುವ ಸೂಚನೆ ನೀಡಿದ ಮೇಲೆ ಸದಾನಂದ ಗೌಡರತ್ತ ಬುಕ್ಕಿಗಳು ಕಣ್ಣಿಟ್ಟರು ಎನ್ನಲಾಗಿದೆ.
ರಾಜಕೀಯ ಬಿಕ್ಕಟ್ಟನ್ನು ಸರಿಯಾಗಿ ಬಳಸಿಕೊಳ್ಳುತ್ತಿರುವ ಬುಕ್ಕಿಗಳು, ಸದಾನಂದ ಗೌಡ ಪರ ಮತ್ತು ವಿರೋಧ ಬೆಟ್ಟಿಂಗ್ ನಲ್ಲಿ ಮುಳುಗಿದ್ದರು. ಸದಾನಂದ ಗೌಡರ ಪರ 4-1 ಬೆಟ್ ನಡೆಯುತ್ತಿದೆ. ವಿರೋಧವಾಗಿ ಶೆಟ್ಟರ್ ಪರ 6-1ರಂತೆ ಬೆಟ್ ಕಟ್ಟುತ್ತಿದ್ದಾರೆ.
ಯಡಿಯೂರಪ್ಪ ರಾಜೀನಾಮೆ ನೀಡುವ ಮುನ್ನ 'ಮುಖ್ಯಮಂತ್ರಿ ಆಗಿ ಉಳಿಯುತ್ತಾರೆ' ಎಂದು ಬೆಟ್ಟಿಂಗ್ ಶುರುವಾದಾಗ ಪರ್ಯಾಯ ನಾಯಕತ್ವದ ವಿಷಯದಲ್ಲಿ 10-1 ಅನುಪಾತದಲ್ಲಿ ಬೆಟ್ ಸಾಗಿತ್ತು. ಆದರೆ, ಯಡಿಯೂರಪ್ಪ ಸರ್ಕಾರದ ಪತನ ನಂತರ ಬೆಟ್ಟಿಂಗ್ ಚಿತ್ರಣ ಕೂಡಾ ಬದಲಾಗಿ ಗೌಡರ ಪರ ಬುಕ್ಕಿಗಳು ಹೆಚ್ಚು ಬೆಟ್ ಕಟ್ಟಿದರು.












Click it and Unblock the Notifications