ಯುರೋಪ್ ಯುವತಿಯರಿಗೆ ನಾಮ ಇಟ್ಟ ಯೋಗ ಗುರು

ಜುಲೈ 25ರಂದು ಪ್ರಸಿದ್ಧ ಕುಜರಾಹೊಗೆ ಬಂದಿಳಿದ ಇವರಿಬ್ಬರನ್ನೂ ಮಾತಿನಲ್ಲಿ ಮರಳುಮಾಡಿದ ನಗಲಿ ಗುರು, 'ಬನ್ನಿ, ನಿಮ್ಮನ್ನೂ ಯೋಗಾ ಗುರುಗಳನ್ನಾಗಿ ಮಾಡಿಸುತ್ತೇನ. 30 ದಿನದಲ್ಲಿ ಯೋಗಾ ಗುರು ಆಗುವುದು ಹೇಗೆ ಎಂಬುದನ್ನು ನಾನು ಹೇಳಿಕೊಡುತ್ತೇನೆ' ಎಂದು ಪುಸಲಾಯಿಸಿದ್ದಾನೆ.
ಮರುಳಾದ ಇಬ್ಬರೂ ಯುವತಿಯರು ಅದಕ್ಕಾಗಿ ತಲಾ ಜಸ್ಟ್ 1,450 ಯುರೊ ಹಣ ನೀಡಿದ್ದಾರೆ. ಆದರೆ ಹಣ ಕೊಟ್ಟಿದ್ದಷ್ಟೇ ಭಾಗ್ಯ ಬಂತು. ಆಸಾಮಿ ಹಣ ಇಸ್ಕೊಂಡು ಪರಾರಿಯಾಗಿದ್ದಾನೆ. ಛತ್ತರ್ ಪುರ ಜಿಲ್ಲೆಯ ಕುಜರಾಹೊ ಪಟ್ಟಣದ ಬಮಿತಾ ಪೊಲೀಸ್ ಠಾಣೆಯಲ್ಲಿ ಇಬ್ಬರೂ ಮಹಿಳೆಯರು ತಮಗಾದ ವಂಚನೆಯನ್ನು ಹೇಳಿಕೊಂಡು ಈಗ ಕಾಲಕ್ಷೇಪ ಮಾಡುತ್ತಿದ್ದಾರೆ.
www.arihantayoga.org ಮೂಲಕ ನಾವು ಮೋದ ಹೋದೆವು. ಅದರಲ್ಲಿದ್ದ ಚಿತ್ತಾಕರ್ಷಕ ಚಿತ್ರಗಳನ್ನು ನೋಡಿ ಮರುಳಾದೆವು. ನಾವೂ ಅಧಿಕೃತವಾಗಿ ಯೋಗ ಗುರುಗಳಾಗಬೇಕು ಎಂದು ಕನಸು ಕಂಡೆವು ಎಂದು ಅವರು ಅವಲತ್ತುಕೊಂಡಿದ್ದಾರೆ.












Click it and Unblock the Notifications