ಯಾದಗಿರಿಯಲಿ ಮೋಡವೇ ಸುರಿಸಿದ ಕಣ್ಣೀರಧಾರೆ

ಮಳೆಯಲ್ಲಿ ನೆನೆಯುತ್ತಲೇ ಕಳೆದ ವರ್ಷ 2010ರ ಏಪ್ರಿಲ್ 10ರಂದು ಯಾದಗಿರಿಯನ್ನು ಗುಲಬರ್ಗ ಜಿಲ್ಲೆಯಿಂದ ವಿಭಿಜಿಸಿ ಹೊಸ ಜಿಲ್ಲೆ ಹುಟ್ಟುಹಾಕಿದ ಯಡಿಯೂರಪ್ಪನವರನ್ನು ಯಾದಗಿರಿ ಜನರು ಈಗಲೂ ನೆನೆಯುತ್ತಿದ್ದಾರೆ.
ಗುಲಬರ್ಗದಲ್ಲಿ 2009ರ ಡಿಸೆಂಬರ್ 30ರಂದು ನಡೆಸಿದ್ದ ಸಂಪುಟ ಸಭೆಯಲ್ಲಿ ಯಾದಗಿರಿಯನ್ನು ನೂತನ ಜಿಲ್ಲೆಯಾಗಿ ಮಾಡುವುದಾಗಿ ಯಡಿಯೂರಪ್ಪ ಘೋಷಿಸಿದ್ದರು. ನುಡಿದಂತೆಯೇ ನಡೆದುಕೊಂಡು ಹರುಷದ ಹೊಳೆಯನ್ನೂ ಹರಿಸಿದ್ದರು.
ಯಾದಗಿರಿ ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಮಳೆಸುರಿಯುತ್ತಿದೆ. ಧರೆಗುರುಳಿದ್ದ ಮಳೆರಾಯನಿಂದ ನಗರದ ಹಲವೆಡೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಮಳೆಯಿಂದ ನಗರ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಮನೆಯಲ್ಲಿ ಕುಳಿತು ರಾಜಕೀಯ ಮ್ಯಾಚ್ ಕುತುಹಲದಿಂದ ನೋಡುತ್ತಿದ್ದಾರೆ.
ಬಿಡದ ಮಳೆಯಿಂದ ಒಳರಸ್ತೆಗಳೆಲ್ಲವೂ ವಿರಾಟ್ ರೂಪ ತೋರಲು ಆರಂಭಿಸಿವೆ. ಕಿತ್ತು ಹೋದ ರಸ್ತೆಗಳ ಮಧ್ಯೆ ಗುಂಡಿಗಳದೇ ದರ್ಬಾರು. ರಸ್ತೆಯೆಲ್ಲ ರಾಡಿ ನೀರಿನ ಹೊಂಡಗಳಾಗಿ ಪರಿವರ್ತಿತವಾಗಿವೆ. ರಸ್ತೆಯ ಪಕ್ಕದಲ್ಲಿಯ ಚರಂಡಿ ತುಂಬಿ ತುಳುಕುತ್ತಿವೆ. ಸೊಳ್ಳೆಗಳು ಜಿಲ್ಲಾಭಾರ ನಡೆಸಿವೆ.
ಪುಟ್ಟ ಪುಟ್ಟ ಮಕ್ಕಳು ಮಳೆಯ ನೀರಿನಲ್ಲಿ ಹಡಗುಗಳನ್ನು ಮಾಡಿ ಭಾನುವಾರದ ರಜೆಯನ್ನು ಆಟವಾಡುವುದರ ಮುಖಾಂತರ ಕಳೆಯುತ್ತಿದ್ದಾರೆ. ಒಟ್ಟಿನಲ್ಲಿ ಈ ಮಳೆಯ ನಡುವೆ ದೊಡ್ಡವರಿಗೆ ರಾಜಕೀಯದ ಚಿಂತೆಯಾದರೆ ಮಕ್ಕಳಿಗೆ ಆಟದ ಮಜಾ.












Click it and Unblock the Notifications