ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸೆಗಿದ ಪಿಟಿ ಮೇಷ್ಟ್ರು

ಪ್ರತಾಪ್ ನಗರ ಶಾಪಿಂಗ್ ಸೆಂಟರ್ ನ ನಿವಾಸಿಯಾದ ವಿದ್ಯಾರ್ಥಿನಿ ಹಾಗೂ ಆಕೆ ಪೋಷಕರು ಅಶ್ವಿನಿ ಗೋಸ್ವಾಮಿ ಎಂಬ ವ್ಯಕ್ತಿಯ ಮೇಲೆ ದೂರು ನೀಡಿದ್ದಾರೆ. ಫತೇ ನಗರದ ನಿವಾಸಿಯಾದ ಈತ 58 ವರ್ಷದವನಾಗಿದ್ದು, 16 ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಎಸೆಗಿದ್ದಾನೆ ಎಂಬ ಆರೋಪ ಹೊರೆಸಲಾಗಿದೆ.
ಡ್ರಾಯಿಂಗ್ ಸ್ಪರ್ಧೆಯಿದೆ ಬಾ ಎಂದು ಹುಡುಗಿಯನ್ನು ಕರೆದುಕೊಂಡು ಹೋದ ದೈಹಿಕ ತರಬೇತಿ ಶಿಕ್ಷಕ ಗೋಸ್ವಾಮಿ, ಕಮಲ ನೆಹ್ರೂ ನಗರದ ನಿರ್ಜನ ಪ್ರದೇಶದ ಮನೆಯೊಂದಕ್ಕೆ ಆಕೆಯನ್ನು ಎಳೆದೊಯ್ದು ಅತ್ಯಾಚಾರ ಮಾಡಿದ್ದಾನೆ. ನಂತರ ಏನು ನಡೆದಿಲ್ಲ ಎಂಬಂತೆ ಆಕೆಯನ್ನು ಮನೆಗೆ ಬಿಟ್ಟು ತಾನು ಮನೆಗೆ ಹೋಗಿದ್ದಾನೆ.
ಆರೋಪಿ ಗೋಸ್ವಾಮಿಯನ್ನು ಬಂಧಿಸಲಾಗಿದೆ. ವಿದ್ಯಾರ್ಥಿನಿ ಹಾಗೂ ಆರೋಪಿಯನ್ನು ಸಮೀಪದ ಎಂಜಿಎಚ್ ಆಸ್ಪತ್ರೆಗೆ ಕರೆದುಕೊಂಡು ಪರೀಕ್ಷೆ ನಡೆಸಲಾಗಿದೆ. ವರದಿಯನ್ನು ನಿರೀಕ್ಷಿಸಲಾಗಿದೆ ಎಂದು ತನಿಖಾಧಿಕಾರಿ ಹರೇಂದ್ರ ಕುಮಾರ್ ಹೇಳಿದ್ದಾರೆ.












Click it and Unblock the Notifications