ವರಿಷ್ಠರೆ, ಯಡಿಯೂರಪ್ಪ ಆಟ ಇನ್ನೂ ಮುಗಿದಿಲ್ಲ!

The game not over
ಬೆಂಗಳೂರು, ಜು. 30 : ಯಡಿಯೂರಪ್ಪನವರು ರಾಜೀನಾಮೆ ನೀಡಲು ಮುಂದಾಗಿದ್ದರೂ ಬಿಜೆಪಿಯ ಗೋಳು ಇನ್ನೂ ಮುಂದುವರಿಯುವ ಲಕ್ಷಣಗಳು ಕಾಣಿಸುತ್ತಿವೆ. ಯಡಿಯೂರಪ್ಪ ಬೇಷರತ್ ರಾಜೀನಾಮೆ ನೀಡಲು ಮುಂದಾಗಿದ್ದರೆ, ಅವರ ಬೆಂಬಲಿಗರು ಹೊಸ ಷರತ್ತುಗಳನ್ನು ಹೊತ್ತು ವರಿಷ್ಠರ ಮುಂದೆ ನಿಂತಿದ್ದಾರೆ.

ಹೊಸ ನಾಯಕನ ಆಯ್ಕೆ ಇನ್ನು ಸಲೀಸು ಎಂದು ವರಿಷ್ಠರು ಅಂದುಕೊಳ್ಳುತ್ತಿರುವ ಸಂದರ್ಭದಲ್ಲಿಯೆ, ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷೀಲಿ ಎಂಬಂತೆ ಮತ್ತೆ ತೊಂದರೆಗಳು ಬಿಜೆಪಿ ಹಿರಿಯ ನಾಯಕರೆದಿರು ವಕ್ಕರಿಸಿವೆ. ಯಡಿಯೂರಪ್ಪನವರ ಆಟ ಇನ್ನೇನು ಮುಗಿಯಿತು ಅನ್ನುವಾಗಲೇ ಹೊಸ ಆಟಗಳನ್ನು ಅವರು ಶುರುಹಚ್ಚಿಕೊಂಡಿದ್ದಾರೆ.

ತೆರೆಯ ಮರೆಯಲ್ಲಿ ನಿಂತು ಹೊಸ ತಂತ್ರಗಳನ್ನು ಹೂಡುತ್ತಿರುವ ಯಡಿಯೂರಪ್ಪನವರು ಈ ಬಾರಿ ತಮ್ಮ ಬೆಂಬಲಿಗರಾದ 62 ಜನ ಶಾಸಕರನ್ನು ಛೂಬಿಟ್ಟಿದ್ದಾರೆ. ಅವರ ಬೆಂಬಲಿಗರು ಮೂರು ಷರತ್ತುಗಳನ್ನು ಮುಂದಿಡಲಿದ್ದಾರೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ.

ಮೊದಲನೆಯದು, ಯಡಿಯೂರಪ್ಪನವರ ಹಿತಶತ್ರು ಅನಂತ್ ಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬಾರದು. ಎರಡನೆಯದು, ಯಡಿಯೂರಪ್ಪನವರನ್ನೇ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಬೇಕು. ಮೂರನೆಯದು, ಯಡಿಯೂರಪ್ಪವರೇ ಸೂಚಿಸಿದ ವ್ಯಕ್ತಿ ಮುಖ್ಯಮಂತ್ರಿಯಾಗಬೇಕು. [ಮುಖ್ಯಮಂತ್ರಿ ರೇಸ್ ನಲ್ಲಿ ಯಾರ್ಯಾರಿದ್ದಾರೆ?]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+