ಮಹೂರ್ತ ಫಿಕ್ಸ್- ಭಾನುವಾರ 3 ಗಂಟೆಗೆ ಯಡಿಯೂರಪ್ಪ ರಾಜೀನಾಮೆ
ಬೆಂಗಳೂರು,
ಜುಲೈ 30: ಬಿಜೆಪಿ ವರಿಷ್ಠರಾದ ರಾಜನಾಥ್ ಸಿಂಗ್ ಮತ್ತು ಅರುಣ್ ಜೇಟ್ಲಿ ಕರೆಯ ಮೇರೆಗೆ ಶನಿವಾರ ಬೆಳಗ್ಗೆ 7 ಗಂಟೆಗೆ ಹೋಟೆಲ್ ಅಶೋಕಕ್ಕೆ ಧಾವಿಸಿದ ಯಡಿಯೂರಪ್ಪ ಅವರು ಸುಮಾರು ಒಂದೂವರೆ ಗಂಟೆ ಕಾಲ ಮಾತುಕತೆ ನಡೆಸಿದ್ದಾರೆ. id="toptextpromo">ಆಷಾಢ
ಕಳೆಯುತ್ತಿದ್ದಂತೆ, ಭಾನುವಾರ ಮಧ್ಯಾಹ್ನ 3 ಗಂಟೆಗೆ ರಾಜ್ಯಪಾಲ ಭಾರದ್ವಾಜ್ ಅವರ ಕೈಗೆ ರಾಜೀನಾಮೆ ಪತ್ರ ಸಲ್ಲಿಸಲು ಯಡಿಯೂರಪ್ಪ ಸಮ್ಮತಿಸಿದ್ದಾರೆ. ಬಳಿಕ, ಭಾನುವಾರ ಸಂಜೆ 4 ಗಂಟೆಗೆ ಬಿಜೆಪಿ ಶಾಸಕರು ಸಭೆ ಸೇರಿ ನೂತನ ನಾಯಕನ ಆಯ್ಕೆ ಮಾಡುವುದು ಖಚಿತವಾಗಿದೆ. id='are-slot-1' class='oiad oi-axt oiadv'> id='top-searched-articles'>ಈ
ಮಧ್ಯೆ ಯಡಿಯೂರಪ್ಪ ಅವರ ಷರತ್ತುಗಳಿಗೆ ವರಿಷ್ಠರು ಒಪ್ಪಿದ್ದಾರೆಯೇ ಎಂಬುದು ಇನ್ನೂ ಬಹಿರಂಗವಾಗಿಲ್ಲ. ವರಿಷ್ಠರ ಜತೆ ಮಾತುಕತೆ ಮುಗಿಯುತ್ತಿದ್ದಂತೆ ತಮ್ಮ ನಿಷ್ಠಾವಂತ ಶಾಸಕರೊಂದಿಗೆ ಯಡಿಯೂರಪ್ಪ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆದಿದೆ. ನಾಳೆ ತಾವು ರಾಜೀನಾಮೆ ನೀಡುವುದು ಖಚಿತ ಎಂದು ಸಭೆಯಲ್ಲಿ ಯಡಿಯೂರಪ್ಪ ಘೋಷಿಸಿದ್ದಾರೆ.











Click it and Unblock the Notifications