ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದಾಆನಂದ ಬೇಡ್ವೆ ಬೇಡ; ಅನಂತ್- ಅಶೋಕ್ ಒಕ್ಕೊರಲು

By Srinath
|
Google Oneindia Kannada News

H.N Aananth Kumar -bsy
ಬೆಂಗಳೂರು, ಜುಲೈ 30: ಯಡಿಯೂರಪ್ಪ ರಾಜೀನಾಮೆ ಪ್ರಹಸನ ಮುಗಿಯುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ. ಮುಂದೆ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದರತ್ತಲೇ ಚರ್ಚೆಗಳು ಗಿರಕಿ ಹೊಡೆಯುತ್ತಿವೆ. ಸದ್ಯಕ್ಕೆ, ಪಕ್ಷದ ಮಾಜಿ ರಾಜ್ಯಾಧ್ಯಕ್ಷ ಹಾಗೂ ಸಂಸದ ಡಿ.ವಿ. ಸದಾನಂದಗೌಡ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ.

ಆದರೆ, ಸದಾನಂದಗೌಡರನ್ನು ಮುಖ್ಯಮಂತ್ರಿಯನ್ನಾಗಿ ಪರಿಗಣಿಸಲು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಚ್. ಎನ್. ಅನಂತಕುಮಾರ್ ಮತ್ತು ಗೃಹ ಸಚಿವ ಆರ್‌.ಅಶೋಕ್‌ ಬಲವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಅನಂತಕುಮಾರ್ ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಕಾರಣ ಸರಳ. ಸದಾನಂದಗೌಡ ಅವರು ಯಡಿಯೂರಪ್ಪ ಅವರಿಗೆ ತೀರಾ ಆತ್ಮೀಯರು. ರಾಜ್ಯಾಧ್ಯಕ್ಷರಾಗಿದ್ದಾಗ ಯಡಿಯೂರಪ್ಪ ಅವರ ನೆರಳಿನಂತೆಯೇ ನಡೆದುಕೊಂಡರು. ಹೀಗಾಗಿ ಅವರನ್ನು ಮುಖ್ಯಮಂತ್ರಿಯನ್ನಾಗಿಸಿದರೆ ಯಡಿಯೂರಪ್ಪ ಅವರೇ ಪರೋಕ್ಷವಾಗಿ ಆಡಳಿತದ ಮೇಲೆ ಹಿಡಿತ ಸಾಧಿಸುತ್ತಾರೆ ಎಂಬುದು ಅನಂತ್‌ ಆತಂಕ.

ಆದರೆ, ಸಚಿವ ಅಶೋಕ್‌ ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ವಿಶಿಷ್ಟ ಕಾರಣವೊಂದಿದೆ. ಅದು ಜಾತಿಯದ್ದು. ಅಶೋಕ್‌ ಮತ್ತು ಸದಾನಂದಗೌಡರಿಬ್ಬರೂ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಸದಾನಂದಗೌಡರು ಕರಾವಳಿ ಒಕ್ಕಲಿಗರಾದರೆ, ಅಶೋಕ್‌ ಪಕ್ಕಾ ಹಳೆ ಮೈಸೂರು ಭಾಗದ ಒಕ್ಕಲಿಗರು.

ಸಹಜವಾಗಿಯೇ ಒಕ್ಕಲಿಗ ಸಮುದಾಯದಲ್ಲಿ ಸದಾನಂದಗೌಡರನ್ನು ಇದುವರೆಗೂ ಒಬ್ಬ ಪ್ರಬಲ ನಾಯಕ ಎಂದು ಒಪ್ಪಿಕೊಂಡಿಲ್ಲ. ಜತೆಗೆ ಸದಾನಂದಗೌಡರು ಕೂಡ ತಮ್ಮನ್ನು ಒಕ್ಕಲಿಗ ಸಮುದಾಯದಲ್ಲಿ ಬಲವಾಗಿ ಗುರುತಿಸಿಕೊಳ್ಳುವ ಪ್ರಯತ್ನ ಮಾಡಿಲ್ಲ. ಆದರೆ, ಅಶೋಕ್‌ ಹಾಗಲ್ಲ. ಒಕ್ಕಲಿಗರ ಪ್ರಬಲ ನಾಯಕರೆಂದು ಹೊರಹೊಮ್ಮುವ ಪ್ರಯತ್ನದಲ್ಲಿದ್ದಾರೆ. ಬಿಜೆಪಿಯಲ್ಲಂತೂ ಸದ್ಯಕ್ಕೆ ಒಕ್ಕಲಿಗರ ಮುಂಚೂಣಿ ನಾಯಕರೆಂದು ಗುರುತಿಸಿಕೊಂಡಿದ್ದಾರೆ.

ಈಗೊಂದು ವೇಳೆ ಸದಾನಂದಗೌಡರನ್ನು ಮುಖ್ಯಮಂತ್ರಿಯನ್ನಾಗಿಸಿದರೆ ಒಕ್ಕಲಿಗರಲ್ಲಿ ಬಹುಬೇಗ ಮುಂಚೂಣಿ ನಾಯಕರಾಗಿ ಗುರುತಿಸಲ್ಪಡುವುದರಲ್ಲಿ ಅನುಮಾನವೇ ಇಲ್ಲ. ಇದರಿಂದ ಹೆಚ್ಚು ನಷ್ಟ ಸಂಭವಿಸುವುದು ತಮಗೆ ಎಂದು ಅಶೋಕ್‌ ಭಾವಿಸಿದ್ದಾರೆ.

English summary
In the aftermath of BS Yeddyurappa agreeing to resign R. Ashok -H.NAananth Kumar duo oppose Sadananda Gowda for CM post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X