ರಂಗಕ್ಕೆ ಇಳಿದ ಅಶೋಕ್, ಡಿಸಿಎಂ ಪಟ್ಟ ನನಗೇ ಇರಲಿ
ಬೆಂಗಳೂರು,
ಜುಲೈ 30: ಹಿರಿತನದ ಆಧಾರದ ಮೇಲೆ ತಮಗೆ ಸದ್ಯಕ್ಕೆ ಮುಖ್ಯಮಂತ್ರಿ ಪಟ್ಟ ಸಿಗುವುದಿಲ್ಲ ಎಂಬುದು ಗೃಹ ಸಚಿವ ಅಶೋಕ್ ಅವರಿಗೆ ಮನವರಿಕೆ ಆಗಿದೆ. ಹೀಗಾಗಿಯೇ ಉಖಮುಖ್ಯಮಂತ್ರಿ ಪಟ್ಟಕ್ಕಾಗಿ ತೀವ್ರ ಲಾಬಿ ಆರಂಭಿಸಿದ್ದಾರೆ. ಇದಕ್ಕಾಗಿ ಅನಂತಕುಮಾರ್, ಈಶ್ವರಪ್ಪ, ಸಂಘ ಪರಿವಾರದ ಮುಖಂಡರನ್ನು ಒಳಗೊಂಡಂತೆ ಗಣಿ ರೆಡ್ಡಿಗಳನ್ನೂ ಮನವೊಲಿಸುವ ಪ್ರಯತ್ನವನ್ನು ತೀವ್ರವಾಗಿ ನಡೆಸಿದ್ದಾರೆ. id="toptextpromo">ಸದಾನಂದಗೌಡರನ್ನು
ವಿರೋಧಿಸುತ್ತಿರುವುದಕ್ಕೆ ಇದೂ ಒಂದು ಕಾರಣ ಎನ್ನಲಾಗಿದೆ. ಸದಾನಂದಗೌಡರೇನಾದರೂ ಮುಖ್ಯಮಂತ್ರಿಯಾದರೆ ತಮಗೆ ಉಪಮುಖ್ಯಮಂತ್ರಿ ಸ್ಥಾನ ಕೇಳುವುದಕ್ಕೂ ಆಗುವುದಿಲ್ಲ. ಜತೆಗೆ ಈಗಿರುವ ಗೃಹ ಮತ್ತು ಸಾರಿಗೆಯಂಥ ಎರಡು ಪ್ರಮುಖ ಖಾತೆಗಳನ್ನು ನೀಡುವುದಿಲ್ಲ ಎಂಬ ಆತಂಕವೂ ಅಶೋಕ್ ಅವರನ್ನು ಬಲವಾಗಿ ಕಾಡುತ್ತಿದೆ. id='are-slot-1' class='oiad oi-axt oiadv'> id='top-searched-articles'>ಹೀಗಾಗಿಯೇ
ಪಕ್ಷದ ಹಿರಿಯ ನಾಯಕರೊಂದಿಗೆ ಮಾತುಕತೆ ವೇಳೆ ಅಶೋಕ್ ಅವರು ಯಾವುದೇ ಕಾರಣಕ್ಕೂ ಸದಾನಂದಗೌಡರನ್ನು ಮುಖ್ಯಮಂತ್ರಿಯನ್ನಾಗಿಸಬೇಡಿ ಎಂದು ಪಟ್ಟು ಹಿಡಿಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.











Click it and Unblock the Notifications