ವರದಕ್ಷಿಣೆ ಕಿರುಕುಳ: ಕೊನೆಗೂ ಚಿರಂಜೀವಿ ಅಳಿಯ ಶರಣು
ಹೈದರಾಬಾದ್,
ಜುಲೈ 29: ನಟ ಚಿರಂಜೀವಿ ಅವರ ಅಳಿಯ ಶಿರೀಶ್ ಭಾರದ್ವಾಜ್ ನನ್ನು ಪತ್ನಿಗೆ ವರದಕ್ಷಿಣೆ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಕೊನೆಗೂ ಸ್ಥಳೀಯ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. id="toptextpromo">ಚಿರಂಜೀವಿ
ಮಗಳು ಶ್ರೀಜಾಳನ್ನು ಚಿರು ವಿರೋಧದ ನಡುವೆಯೂ 2007ರಲ್ಲಿ ಶಿರೀಶ್ ಮದುವೆಯಾಗಿದ್ದ. ಆದರೆ ಮದುವೆ ನಂತರ ಇಬ್ಬರ ಮಧ್ಯೆಯೂ ಒಡಕುಂಟಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ನಡುವೆ, ಪತಿ ಮತ್ತು ಅತ್ತೆ ತನಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಶ್ರೀಜಾ ಪೊಲೀಸರಿಗೆ ದೂರು ನೀಡಿದ್ದಳು. id='are-slot-1' class='oiad oi-axt oiadv'> id='top-searched-articles'>ಬಳಿಕ
4 ತಿಂಗಳಿಂದ ತಲೆಮರೆಸಿಕೊಂಡು ತಿರುಗುತ್ತಿದ್ದ ಶಿರೀಶ್, ಸುಪ್ರೀಂ ಕೋರ್ಟಿಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದ. ಆದರೆ ಅದು ತಿರಸ್ಕೃತವಾದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಕೋರ್ಟಿಗೆ ಶರಣಾಗಿದ್ದಾನೆ. ಶಿರೀಶ್‌ನನ್ನು ಆಗಸ್ಟ್ 8ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.











Click it and Unblock the Notifications