• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಯಚೂರು ಮಣ್ಣಿನ ಮಗ ನ್ಯಾ. ಶಿವರಾಜ್ ಪಾಟೀಲ್

By Srinath
|
ಬೆಂಗಳೂರು, ಜುಲೈ26: ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಕರ್ನಾಟಕ ನೂತನ ಲೋಕಾಯುಕ್ತರಾಗಿ ಮಂಗಳವಾರ ನೇಮಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬನ್ನಿ ಅವರ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ...

11.1.2005ರಲ್ಲಿ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಯಾಗಿ ನಿವೃತ್ತರಾದ ನ್ಯಾ. ಪಾಟೀಲ್ ಅವರು 1940ರ ಜನವರಿ 12ರಂದು ರಾಯಚೂರು ಜಿಲ್ಲೆ ಮಲದಕಾಯಿ ಗ್ರಾಮದಲ್ಲಿ ಜನನ. ವಿರೂಪಣ್ಣ ಪಾಟೀಲ್ ಇವರ ತಂದೆ. ಡಾ ಶರಣ್ ಪಾಟೀಲ್ ಮತ್ತು ಹಿರಿಯ ವಕೀಲ ಬಸವಪ್ರಭು ಪಾಟೀಲ್ ಇವರ ಮಕ್ಕಳು.

1962ರಲ್ಲಿ ಗುಲ್ಬರ್ಗಾದಲ್ಲಿ ವಕೀಲಿ ವೃತ್ತಿ ಆರಂಭ. 1979 ರವರೆಗೂ ಅಲ್ಲಿ ನ್ಯಾಯವಾದಿಯಾಗಿದ್ದರು. ಈ ಮಧ್ಯೆ, ಗುಲ್ಬರ್ಗಾದ ಸೇಠ್ ಶಂಕರಲಾಲ್ ಲಹೋಟಿ ಕಾನೂನು ಕಾಲೇಜಿನಲ್ಲಿ ಅರೆಕಾಲಿಕ ಕಾನೂನು ಉಪನ್ಯಾಸಕರಾಗಿದ್ದರು. 1975ರಿಂದ 78ರವರೆಗೂ ಇದೇ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ಹೈದರಾಬಾದಿನ ಶ್ರೀ ಶರಣ ಬಸವೇಶ್ವರ ಸಂಸ್ಥಾನದ ಕರ್ನಾಟಕ ಶಿಕ್ಷಣ ಸಂಸ್ಥೆಯ ಕಾನೂನು ಸಲಹೆಗಾರಾಗಿದ್ದರು. ಶ್ರೀ ಬಸವೇಶ್ವರರ ಬಗ್ಗೆ ಪುಸ್ತಕವನ್ನೂ ಬರೆದಿದ್ದಾರೆ.

ಕರ್ನಾಟಕ ಹೈಕೋರ್ಟಿನಲ್ಲಿ ವಿಶೇಷವಾಗಿ ಪ್ರಾಕ್ಟೀಸ್ ಮಾಡುವ ಉದ್ದೇಶದಿಂದ 1979ರಲ್ಲಿ ಬೆಂಗಳೂರಿಗೆ ಬಂದರು. ಬೆಂಗಳೂರು ಅಭಿವೃದ್ಧಿ ಮಂಡಳಿ, ಕೇಂದ್ರ ರೇಷ್ಮೆ ಮಂಡಳಿಯ ಸ್ಥಾಯಿ ಸಮಿತಿಗಳ ಸದಸ್ಯರೂ ಆಗಿದ್ದರು. ಬೆಂಗಳೂರು ವಿವಿ, ಗುಲ್ಬರ್ಗಾ ವಿಶ್ವವಿದ್ಯಾಲಯಗಳ ಪರವಾಗಿ ಅಡ್ವೊಕೇಟ್ ಆಗಿದ್ದರು.

1980ರಲ್ಲಿ ಬೆಲ್ ಗ್ರೇಡ್ ಮತ್ತು ಬರ್ಲಿನ್ ನಲ್ಲಿ ನಡೆದ ಅಂತಾರಾಷ್ಟ್ರೀಯ ವಕೀಲರುಗಳ ಸಮ್ಮೇಳನದಲ್ಲಿ ಭಾಗವಹಿಸಿದ್ದರು. 1987ರಲ್ಲಿ ಮತ್ತೆ ರಷ್ಯಾ, ಯುರೋಪ್ ರಾಷ್ಟ್ರಗಳಿಗೆ ಭೇಟಿ ನೀಡಿದರು. 1995 ಮತ್ತು 96ರಲ್ಲಿ ಬ್ರಿಟನ್ನಿಗೆ, 1995ರಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದರು. ಈ ಮಧ್ಯೆ ಅವರು ಇನ್ನೂ ಅನೇಕ ವಿದೇಶ ಪ್ರವಾಸಗಳನ್ನು ಅವರು ಕೈಗೊಂಡಿದ್ದಾರೆ.

29.3.1990ರಂದು ಕರ್ನಾಟಕ ಹೈಕೋರ್ಟ್ ಜಡ್ಜ್ ಆಗಿ ನೇಮಕಗೊಂಡರು. 1994ರಲ್ಲಿ ಮದ್ರಾಸ್ ಹೈಕೋರ್ಟ್ ಜಡ್ಜ್ ಆಗಿ ವರ್ಗಾವಣೆಗೊಂಡರು. 1998-91ರ ನಡುವೆ ಸುಮಾರು ಒಂದು ತಿಂಗಳ ಕಾಲ ಕಾರ್ಯಕಾರಿ ಛೀಪ್ ಜಸ್ಟೀಸ್ ಆಗಿಯೂ ಕಾರ್ಯನಿರ್ವಹಿಸಿದರು. 22.1.1999ರಲ್ಲಿ ಗುಜರಾತ್ ಹೈಕೋರ್ಟಿನ ಛೀಪ್ ಜಸ್ಟೀಸ್ ಆಗಿ ನೇಮಕಗೊಂಡರು. 15.3.2000ರಲ್ಲಿ ಸುಪ್ರೀಂಕೋರ್ಟಿನ ಜಡ್ಜ್ ಆಗಿ ಭಡ್ತಿ ಪಡೆದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Justice (Retired) Shivraj Patil has been appointed as new Lokayukta for Karnataka. Patil, born on 12th January 1940 at Maladkai, Raichur District. Here is a brief profile of Mr. Patil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more