ಹಗರಣ ಸರಮಾಲೆಯಲ್ಲಿ ನಿ. ಜಡ್ಜ್ ಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು

2ಜಿ ಹಗರಣವನ್ನೇ ತೆಗೆದುಕೊಳ್ಳಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾ. ಶಿವರಾಜ್ ವಿರೂಪಣ್ಣ ಪಾಟೀಲ್ ಅವರು ಏಕಸದಸ್ಯ ಸಮಿತಿಯ ಸದಸ್ಯರಾಗಿ ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು.
ಅದಕ್ಕೂ ಮುನ್ನ ಕಾಮನ್ ವೆಲ್ತ್ ಗೇಮ್ಸ್ ಕರ್ಮಕಾಂಡ ಬಯಲಿಗೆಳೆಯಲು ನಿವೃತ್ತ ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ ವಿ.ಕೆ. ಶುಂಗ್ಲು ಭರ್ಜರಿ ವರದಿಯನ್ನೇ ಸಿದ್ಧಪಡಿಸಿದರು. ಇವರಿಗೆ ಸಾಥ್ ನೀಡಿದ್ದು ಕರ್ನಾಟಕದ ನಿವೃತ್ತ ಐಎಎಸ್ ಅಧಿಕಾರಿ ಶಾಂತನು ಕಾನ್ಸುಲ್.
ಇನ್ನು, ಧರಾಶಾಹಿಯಾಗಿರುವ ಏರ್ ಇಂಡಿಯಾ ಮತ್ತು ಇಂಡಿಯನ್ ಏರ್ ಲೈನ್ಸ್ ವಿಲೀನ ನಿಟ್ಟಿನಲ್ಲಿ ವರದಿಯೊಂದನ್ನು ನೀಡಿ ಎಂದು ವಿಮಾನ ನಾಗರಿಕ ಸಚಿವಾಲಯವು ನಿವೃತ್ತ ನ್ಯಾಯಾಧೀಶರೊಬ್ಬರ ಮೊರೆ ಹೋಯಿತು.
ಅಕ್ರಮ ಗಣಿಗಾರಿಕೆ ಸಂಬಂಧ ಸುಪ್ರೀಂಕೋರ್ಟ್ ನಿವೃತ್ತ ನ್ಯಾ. ಎಂಬಿ ಷಾ ಅವರಿಗೆ ಮಣೆ ಹಾಕಿತು. ಇದು ನಿಜಕ್ಕೂ ಅರ್ಥ್ ಬ್ರೇಕಿಂಗ್ ನಿರ್ಣಯವೇ ಆಗಿದೆ. ಇನ್ನು ಆಯಾ ರಾಜ್ಯಗಳನ್ನು ಪರಿ'ಗಣಿ'ಸಿದಾಗ ಕರ್ನಾಟಕದಲ್ಲಿ ಲೋಕಾಯುಕ್ತ ಸಂತೋಷ್ ಹೆಗಡೆ ಅವರು ಸಕ್ರಿಯರಾಗಿರುವುದು ತಿಳಿದೇ ಇದೆ. ನಾಳೆ (ಜುಲೈ 27) ಅದು ಜಗಜ್ಜಾಹೀರು ಆಗಲಿದೆ!












Click it and Unblock the Notifications