ಚೀನಾ ಚಿಂತೆ: ತಾರುಣ್ಯದಲ್ಲೇ ಸಾಯುತ್ತಿರುವ ಕೋಟಿವೀರರು

ಆದರೆ, ಇಂಥ ಮಿಲಿಯಾಧಿಪತಿಗಳ ಸರಾಸರಿ ಜೀವಿತಾವಧಿಯೂ ಕ್ಷೀಣಿಸುತ್ತಿದೆ. ಕಳೆದ 8 ವರ್ಷಗಳಲ್ಲಿ 72 ಮಂದಿ ಮಿಲಿಯಾಧಿಪತಿಗಳು ತಾರುಣ್ಯದಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ.
2003ರಿಂದೀಚೆಗೆ 10 ಕೋಟಿ ಯೆನ್‌ಗಳಷ್ಟು ವೈಯಕ್ತಿಕ ಸಂಪತ್ತು ಹೊಂದಿರುವ ಬಹು ಮಿಲಿಯಾಧಿಪತಿಗಳು ಅಸ್ವಾಭಾವಿಕ ರೀತಿಯಲ್ಲಿ ಇಲ್ಲವೇ ತಾರುಣ್ಯದಲ್ಲಿಯೇ ಸಾವನ್ನಪ್ಪಿರುವುದು ಕಂಡು ಬಂದಿದೆ ಎಂದು ವರದಿ ತಿಳಿಸಿದೆ.
15 ಮಂದಿ ಸಂಪತ್ತಿನ ಕಾರಣಕ್ಕಾಗಿ ಹತ್ಯೆಗೀಡಾಗಿದ್ದರೆ, 17 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 7 ಮಂದಿ ಅಪಘಾತಕ್ಕೆ ಬಲಿಯಾಗಿದ್ದರೆ, 14 ಮಂದಿಯನ್ನು ನೇಣಿಗೆ ಹಾಕಲಾಗಿದೆ. ಇತರ 19 ಮಂದಿ ಅನಾರೋಗ್ಯದಿಂದ ತಾರುಣ್ಯದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ನ್ಯೂ ಕಲ್ಚರ್ ವೀವ್ ನಿಯತಕಾಲಿಕೆ ವರದಿ ಮಾಡಿದೆ.
ಅನಾರೋಗ್ಯದಿಂದ ಸಾವಿಗೀಡಾದ ಮಿಲಿಯಾಧಿಪತಿಗಳ ಸರಾಸರಿ ವಯಸ್ಸು 48 ಆಗಿದ್ದು, ಇವರಲ್ಲಿ ಬಹುತೇಕರು ಹೃದಯಾಘಾತ ಹಾಗೂ ಕ್ಯಾನ್ಸರಿಗೆ ಬಲಿಯಾಗಿದ್ದಾರೆ. ಜುನ್ಯಾವೋ ಗ್ರೂಪ್‌ನ ಅಧ್ಯಕ್ಷ ವಾಂಗ್ ಜುನ್ಯಾವೋ ಕ್ಯಾನ್ಸರಿನಿಂದಾಗಿ 38ನೇ ವಯಸ್ಸಿಗೆ ಸಾವನ್ನಪ್ಪಿದ್ದರು. ಹಲವು ವರ್ಷಗಳ ಕಾಲ ಅವರು ರಕ್ತದೊತ್ತಡ ಹಾಗೂ ಇತರ ಕಾಯಿಲೆಗಳಿಂದಲೂ ಬಳಲುತ್ತಿದ್ದರು.












Click it and Unblock the Notifications