ಹೆಗ್ಡೆ ಮಾಡಿದ್ದು ಒಂಚೂರು ಇಷ್ಟ ಆಗ್ಲಿಲ್ಲ: ಯಡಿಯೂರಪ್ಪ

ಮಾರಿಷಸ್ ನಿಂದ ನೇರವಾಗಿ ನಾಳೆ(ಜು.25) ಬೆಳಗ್ಗೆ ದೆಹಲಿಗೆ ತೆರಳಿರುವ ಯಡಿಯೂರಪ್ಪ ಪಕ್ಷದ ವರಿಷ್ಠರೊಡನೆ ಚರ್ಚೆ ನಡೆಸಲಿದ್ದಾರೆ. ಸಂಜೆ ಬೆಂಗಳೂರಿಗೆ ಆಗಮಿಸಿ, ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
ಲೋಕಾಯುಕ್ತರ ಸುದ್ದಿಗೋಷ್ಠಿ, ವರದಿ ಸೋರಿಕೆ, ಕಣ್ಣೀರಧಾರೆ ಬಗ್ಗೆ ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಯಡಿಯೂರಪ್ಪ, ರಾಜ್ಯದಲ್ಲಿ ರಾಜಕೀಯ ಅಶಾಂತಿ ಉಂಟು ಮಾಡುವುದು ಲೋಕಾಯುಕ್ತ ಸಂತೋಷ್ ಹೆಗ್ಡೆ ಅಂಥವರಿಗೆ ಶೋಭಿಸುವುದಿಲ್ಲ.
ವರದಿ ಸಾರ್ವಜನಿಕವಾಗುವ ಮೊದಲೇ ಚರ್ಚೆಗೆ ಈಡುಮಾಡಿದ್ದಾರೆ. ವರದಿ ಸರ್ಕಾರದ ಮುಂದೆ ಬಂದ ನಂತರ ಸದನದಲ್ಲಿ ಆ ಬಗ್ಗೆ ಚರ್ಚಿಸುವುದು ಸೂಕ್ತ ಹಾಗೂ ಸಮಂಜಸ. ಆದರೆ, ಲೋಕಾಯುಕ್ತರು ಅನುಸರಿಸುತ್ತಿರುವ ಕ್ರಮ ಸರಿಯಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.











Click it and Unblock the Notifications