ಡಾರ್ಜಿಲಿಂಗ್: ಪೊಲೀಸರ ಬೆನ್ನುಹತ್ತಿದ ಚಿರತೆ ನೋಡಿದಿರಾ!?
ಕೋಲ್ಕತಾ,
ಜುಲೈ 20: ಕರ್ನಾಟಕದಲ್ಲಿ ಚಿರತೆ ಹಾವಳಿ ಅವ್ಯಾಹತವಾಗಿದೆ. ಇದರ ಹಾವಳಿ ಸಾಕಪ್ಪಾ ಸಾಕು ಅನ್ನುತ್ತಿದ್ದೀರಾ? ಹಾಗಾದರೆ ಸಿಲಿಗುರಿಯಲ್ಲಿ ಚಿರತೆಯೊಂದು ಅಕ್ಷರಶಃ ಪೊಲೀಸರ ಬೆನ್ನುಹತ್ತಿರುವುದು ನೋಡಿದರೆ ಏನನ್ನುತ್ತೀರೋ. id="toptextpromo">ಏನಾಯಿತೆಂದರೆ...
ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ನ್ಯೂಜಲಪಾಯಗುರಿ ಬಳಿ ಗ್ರಾಮವೊಂದಕ್ಕೆ ಜುಲೈ 19ರಂದು ಬೆಳಗ್ಗೆಯೇ ಚಿತ್ರದಲ್ಲಿರುವ ಚಿರತೆ ನುಗ್ಗಿದ್ದೇ ಬಂತು ಗ್ರಾಮಸ್ಥರು ಚಿಲ್ಲಾಪಿಲ್ಲಿಯಾಗಿದ್ದಾರೆ. ಈ ಮಧ್ಯೆ ಪೊಲೀಸರು, ಅರಣ್ಯ ಸಿಬ್ಬಂದಿ ಅದಕ್ಕೆ ಅರಿವಳಿಕೆ ಮದ್ದು ನೀಡಿ ಸೆರೆ ಹಿಡಿಯಲು ಮುಂದಾಗಿದ್ದಾರೆ. ಕೆರಳಿದ ವನ್ಯಜೀವಿ ಹುಲುಮಾನವನ ಮೇಲೆ ಎಗರೆಗರಿ ಬಿದ್ದು, ಪುಂಡಾಟ ಮೆರೆದಿದೆ. id='are-slot-1' class='oiad oi-axt oiadv'> id='top-searched-articles'>ಹರಸಾಹಸ
ಪಟ್ಟು ಚಿರತೆಯನ್ನು ಸಂಜೆಯ ವೇಳೆಗೆ ಹಿಡಿಯುವಷ್ಟರಲ್ಲಿ ಅದು ಐದು ಮಂದಿಯನ್ನು ಅದು ತೀವ್ರವಾಗಿ ಗಾಯಗೊಳಿಸಿದೆ. ಕೊನೆಗೆ, ಚಿರತೆಯನ್ನು ಸುಖ್ನಾ ಬಳಿ ಪಶು ಚಿಕಿತ್ಸಾಲಯಕ್ಕೆ ಕರೆತರುತ್ತಿದ್ದಂತೆ 'ರೋಗಿ ಮಾರ್ಗ ಮಧ್ಯೆಯೇ ಅಸುನೀಗಿದೆ' ಎಂದು ವೈದ್ಯರು ಷರಾ ಬರೆಯುವುದರೊಂದಿಗೆ ಚಿರತೆ ಭೀತಿ ಕೊನೆಗೊಂಡಿದೆ.ವೈಕುಂಠಪುರ ಅಥವಾ ಮಹಾನಂದ ಸಂರಕ್ಷಿತ ಅರಣ್ಯದಿಂದ ಚಿರತೆ ಗ್ರಾಮದೊಳಕ್ಕೆ ಸುಳಿದಿರಬೇಕು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications