ಹುಣಸೂರು ಕೆಎಫ್‌ಡಿ ಪಾತಕಿಗಳು ಮತ್ತೊಂದು ಹತ್ಯೆಯಲ್ಲೂ ಭಾಗಿ
ಬೆಂಗಳೂರು,
ಜುಲೈ20 : ಕಳೆದ ವರ್ಷ ನಡೆದಿದ್ದ ಹುಣಸೂರಿನ ಉದ್ಯಮಿ ತ್ಯಾಗರಾಜ್ ಪಿಳ್ಳೆ ಕೊಲೆ ಪ್ರಕರಣದಲ್ಲೂ ಕೆಎಫ್‌ಡಿ ಕೈವಾಡವಿರುವುದು ಬೆಳಕಿಗೆ ಬಂದಿದ್ದು, ಮತ್ತಷ್ಟು ಮಾಹಿತಿಯನ್ನು ಸಂಗ್ರಹಿಸಿದ ನಂತರ ಆ ಸಂಘಟನೆಯನ್ನು ನಿಷೇಧಿಸಲಾಗುವುದು ಎಂದು ಗೃಹ ಸಚಿವ ಆರ್.ಅಶೋಕ ತಿಳಿಸಿದ್ದಾರೆ. id="toptextpromo">2010ರಲ್ಲಿ
ಹುಣಸೂರು ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದ ಪಿಳ್ಳೆ ಕೊಲೆಗೆ ಸಂಬಂಧಿಸಿದಂತೆ ಅಬೀಬ್, ಆದೀಲ್, ತನ್ವಿರ್ ಮತ್ತು ಮುನ್ನ ಎಂಬುವರನ್ನು ಬಂಧಿಸಲಾಗಿದೆ. ಅಬೀಬ್ ಹೊರತುಪಡಿಸಿ ಉಳಿದ ಮೂವರು ಈಗಾಗಲೇ ಪತ್ತೆಯಾಗಿರುವ ಹುಣಸೂರಿನ ಇಬ್ಬರು ಬಾಲಕರ ಕೊಲೆ ಪ್ರಕರಣದಲ್ಲೂ ಭಾಗಿಯಾಗಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು. id='are-slot-1' class='oiad oi-axt oiadv'> id='top-searched-articles'>ಕೆಎಫ್‌ಡಿ
ಸಂಘಟನೆಯವರು ಹಣಕ್ಕಾಗಿ ಕೊಲೆ ಮಾಡಿದ್ದಾರೆ. ನೂರಾರು ಜನರೊಂದಿಗೆ ಇವರು ಸಂಪರ್ಕ ಹೊಂದಿದ್ದು, ಹೆಚ್ಚಿನ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. ಭಯೋತ್ಪಾದನೆ ನಿಗ್ರಹ ದಳದ ತಂಡಕ್ಕೂ ಮಾಹಿತಿ ನೀಡಲಾಗುವುದು. ಈ ಸಂಘಟನೆಯನ್ನು ನಿಷೇಧಿಸಿದರೂ ಬಣ್ಣ ಬದಲಾಯಿಸಿ ಬೇರೆ ಹೆಸರಿನಲ್ಲಿ ಮತ್ತೆ ಹೊಸದೊಂದು ಸಂಘಟನೆ ಕಟ್ಟುತ್ತಾರೆ. ಆದ್ದರಿಂದ ನಿಷೇಧ ಮಾಡುವಾಗ ಈ ಬಗ್ಗೆ ಎಚ್ಚರ ವಹಿಸಲಾಗುವುದು ಎಂದರು.











Click it and Unblock the Notifications