ಮರೆಗುಳಿ ಟೆಕ್ಕಿ 10 ಲಕ್ಷ ರೂ ಕಳಕೊಂಡ ಪ್ರಸಂಗ

Forgetting PAN card costs Bangalore techie Rs 10 lakh
ಬೆಂಗಳೂರು ಜು 19: ಸಾಫ್ಟ್ ವೇರ್ ಟೆಕ್ಕಿ ಅರವಿಂದ ಮೂರ್ತಿ ಮರೆಗುಳಿತನಕ್ಕೆ ಭಾರಿ ಬೆಲೆ ತೆತ್ತಿದ್ದಾರೆ. ಸುಮಾರು 10 ಲಕ್ಷ ರೂ ಹಣ ಕಟ್ಟಲು ಬ್ಯಾಂಕ್ ಗೆ ಬಂದಿದ್ದ ಅರವಿಂದ್, ಪ್ಯಾನ್ ಕಾರ್ಡ್ ಮರೆತ್ತಿದ್ದರು. ಪ್ಯಾನ್ ಕಾರ್ಡ್ ತರಲು ಮನೆಗೆ ತೆರಳಿದ ಅರವಿಂದ್ ಮಾರ್ಗ ಮಧ್ಯದಲ್ಲಿ ದುಷ್ಕರ್ಮಿಗಳ ಜಾಲಕ್ಕೆ ಸಿಲುಕಿ ಎಲ್ಲಾ ಹಣವನ್ನು ಕಳೆದುಕೊಂಡು ತಲೆ ಮೇಲೆ ಕೈ ಹೊತ್ತುಕೊಂಡು ಕೂತಿದ್ದಾರೆ.

ಎಂಜಿ ರಸ್ತೆ ಐಸಿಐಸಿ ಬ್ಯಾಂಕ್ ನವರು ಪ್ಯಾನ್ ಕಾರ್ಡ್ ಬೇಕು ಎಂದಾಗ, ಅರವಿಂದ್ ಗೆ ಪ್ಯಾನ್ ಕಾರ್ಡ್ ಮನೆಯಲ್ಲೇ ಮರೆತಿರುವುದು ನೆನಪಿಗೆ ಬಂದಿದೆ. ಓಲ್ಡ್ ಮದ್ರಾಸ್ ರಸ್ತೆಯ ಕಂಪನಿಯೊಂದರ ಉದ್ಯೋಗಿಯಾಗಿರುವ ಅರವಿಂದ್ ತಮ್ಮ ತಂಗಿಯನ್ನು ಕರೆದುಕೊಂದು ಚಲ್ಲಘಟ್ಟದಲ್ಲಿರುವ ಮನೆಗೆ ವಾಪಾಸ್ಸಾಗಿದ್ದಾರೆ.

ಸೋಮವಾರ ಮಧ್ಯಾಹ್ನ 1.30 ವೇಳೆಗೆ ಕ್ವಾಲೀಸ್ ಹತ್ತಿ ಹೊರಟ ಅರವಿಂದ್, ತಮ್ಮ ತಂಗಿಯನ್ನು ಎಚ್ ಎ ಎಲ್ ವಿಮಾನ ನಿಲ್ದಾಣದ ಬಳಿ ಬಿಟ್ಟು, ಮನೆಗೆ ತೆರಳಿದ್ದಾರೆ. ಕಾರ್ಡ್ ತೆಗೆದುಕೊಂಡು ಬ್ಯಾಂಕ್ ಕಡೆಗೆ ಹೊರಟ ಅರವಿಂದ್ ಅವರ ವಾಹನವನ್ನು ಒಂದು ಬೈಕು ಫಾಲೋ ಮಾಡಿಕೊಂಡು ಬಂದಿದೆ.

ಸಿವಿ ರಾಮನ್ ನಗರದ ಸುರಂಜನ್ ದಾಸ್ ರಸ್ತೆ ಬಳಿ ಬರುತ್ತಿದ್ದಂತೆ, ದುಷ್ಕರ್ಮಿಗಳು ಅರವಿಂದ್ ಗಮನ ಸೆಳೆದಿದ್ದಾರೆ. ಸಾರ್ ನಿಮ್ಮ ವಾಹನದಿಂದ ಡೀಸೆಲ್ ಲೀಕ್ ಆಗ್ತ ಇದೆ ಬೇಗ ನೋಡಿ ಎಂದಿದ್ದಾರೆ. ಗಾಬರಿಗೊಂಡ ಅರವಿಂದ್ ಕೆಳಗಿಳಿದು ನೋಡುವಷ್ಟರಲ್ಲಿ ಹಿಂದಿನ ಸೀಟಿನಲ್ಲಿದ್ದ 10 ಲಕ್ಷರೂ ಮಂಗಮಾಯವಾಗಿದೆ.

ಜೀವನ್ ಭೀಮಾ ನಗರ ಪೊಲೀಸರಿಗೆ ಅರವಿಂದ್ ದೂರು ನೀಡಿದ್ದು, ದುಷ್ಕರ್ಮಿಗಳು ಆಂಧ್ರ ಮೂಲದ ಗ್ಯಾಂಗ್ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕಿಲಾಡಿ ಕಳ್ಳರ ಹುಡುಕಾಟ ಜಾರಿಯಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+