ಸಂಸಾರ ಸಮೇತ ಬಿಎಸ್ ಯಡಿಯೂರಪ್ಪ ಮಾರಿಷಸ್‌ಗೆ
ಬೆಂಗಳೂರು,
ಜುಲೈ 19: ಒಂದು ತಿಂಗಳ ಹಿಂದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದಿಢೀರನೆ ವಿಶ್ರಾಂತಿ ಕಮ್ ಚಿಕಿತ್ಸೆಗೆಂದು ಕೇರಳದ ಕೊಟ್ಟಕಲ್ ಆಸ್ಪತ್ರೆಗೆ ಒಂದು ವಾರ ಕಾಲ ದಾಖಲಾಗಿದ್ದರು. ಈ ಬಾರಿಯೂ ಕುಟುಂಬ ಸಮೇತ ಅವರು ಮಾರಿಷಸ್ ಗೆ ತೆರಳಿದ್ದಾರೆ. ಆದರೆ ಚಿಕಿತ್ಸೆಗಲ್ಲ; ವಿಶ್ರಾಂತಿ ಬಯಸಿ. id="toptextpromo">ಹೌದು,
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪುತ್ರರು, ಪುತ್ರಿಯರು, ಮೊಮ್ಮಕ್ಕಳಾದಿಯಾಗಿ ಮಂಗಳವಾರದಿಂದ ಒಂದು ವಾರ ಕಾಲ ಮಾರಿಷಸ್‌ಗೆ ತೆರಳಿದ್ದಾರೆ. ಬೆಳಗ್ಗೆ 5.30ಕ್ಕೆ ತೆರಳಿದ ಅವರು ಇದೇ 25ಕ್ಕೆ ವಾಪಸಾಗುವರು. ಕುಟುಂಬದ ಕೆಲ ಸದಸ್ಯರು ಈಗಾಗಲೇ ಮಾರಿಷಸ್‌ಗೆ ತೆರಳಿದ್ದಾರೆ ಎಂದು ಅವರ ಕಚೇರಿ ಮೂಲಗಳು ತಿಳಿಸಿವೆ. ವಿಶ್ರಾಂತಿ ಸಲುವಾಗಿ ಅವರು ಈ ಪ್ರವಾಸ ಹಮ್ಮಿಕೊಂಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಯಡಿಯೂರಪ್ಪ
ಅವರದು ಇದು ಖಾಸಗಿ ಪ್ರವಾಸ ಆಗಿರುವುದರಿಂದ ಮುಖ್ಯಮಂತ್ರಿ ಕಚೇರಿಯ ಯಾವೊಬ್ಬ ಅಧಿಕಾರಿಯನ್ನೂ ಅವರು ತಮ್ಮ ಸಂಗಡ ಕರೆದೊಯ್ದಿಲ್ಲ. ಈ ಮಧ್ಯೆ ಜನತಾದರ್ಶನವನ್ನು ಜುಲೈ 19 ರಿಂದ 23 ರವರೆಗೆ ರದ್ದುಪಡಿಸಲಾಗಿದೆ.











Click it and Unblock the Notifications