ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಹಕ್ಲಾ' ಇಕ್ಬಾಲ್‌ ಭಟ್ಕಳ್‌ ಪರೀಕ್ಷೆಯಲ್ಲಿ 18 ಬಾರಿ ಫೇಲಾಗಿದ್ದ

By Srinath
|
Google Oneindia Kannada News

bhatkal-brothers-riyaz-iqbal
ಮುಂಬೈ, ಜುಲೈ 18: ಕರ್ನಾಟಕ ಕರಾವಳಿ ಮೂಲದ, ಇಂಡಿಯನ್‌ ಮುಜಾಹಿದೀನ್‌ ಉಗ್ರ ಸಂಘಟನೆಯಲ್ಲಿ ಎರಡನೇ ಅತಿ ಪ್ರಭಾವಶಾಲಿ ವ್ಯಕ್ತಿ ಎನಿಸಿರುವ ಇಕ್ಬಾಲ್‌ ಭಟ್ಕಳ್‌, ಕನ್‌ಸ್ಟ್ರಕ್ಷನ್‌ ಟೆಕ್ನಾಲಜಿ ಡಿಪ್ಲೋಮಾ ಪರೀಕ್ಷೆಯಲ್ಲಿ 18 ಬಾರಿ ಫೇಲಾಗಿದ್ದ. 1982ರಲ್ಲಿ ಭಿವಂಡಿಯ ಶಾದ್‌ ಅದಮ್‌ ಪಾಲಿಟೆಕ್ನಿಕ್ ನಲ್ಲಿ ಮೂರು ವರ್ಷದ ಡಿಪ್ಲೋಮಾ ಕೋರ್ಸ್‌ಗೆ ಪ್ರವೇಶ ಪಡೆದಿದ್ದ. ಪ್ರತಿವರ್ಷವೂ ಪರೀಕ್ಷೆಯಲ್ಲಿ ಫೇಲಾಗುತ್ತಿದ್ದ ಇಕ್ಬಾಲ್‌ 1992ರ ತನಕ ಪರೀಕ್ಷೆಗೆ ಹಾಜರಾಗಿ 18 ಬಾರಿ ಫೇಲಾಗಿದ್ದ.

ಮೊದಲ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದ ಇಕ್ಬಾಲ್‌ ಸಹಪಾಠಿಗಳೊಂದಿಗೆ ಸದಾ ಜಗಳ ಮಾಡುತ್ತಿದ್ದ. ಪಾಠ-ಪ್ರವಚನಗಳ ಕಡೆಗೆ ಗಮನ ಕೊಡುತ್ತಿರಲಿಲ್ಲ. ಉಪನ್ಯಾಸಕರಿಗೂ ಕಿರುಕುಳ ನೀಡುತ್ತಿದ್ದ. ಇವನ ಬಿಕ್ಕಲು ತಿಕ್ಕಲು ಸ್ವಭಾವ ನೋಡಿ ಸಹಪಾಠಿಗಳು ಇವನನ್ನು ಹಕ್ಲಾ (ಅಂದರೆ ಉಗ್ಗು, ತೊದಲು) ಎಂದು ಕರೆಯುತ್ತಿದ್ದರು ಎಂದು ಸಹಪಾಠಿಯೊಬ್ಬರು ಹೇಳುತ್ತಾರೆ.

ಕೊನೆಗೆ ಈತ ಶಿಕ್ಷಣವನ್ನು ನಿಲ್ಲಿಸಿ ಇಲ್ಲಿನ ಮಾನಿಷ್‌ ಮಾರ್ಕೇಟ್‌ನಲ್ಲಿ ಸುಗಂಧ ದ್ರವ್ಯ ಮಾರಾಟ ಮಾಡುವ ವ್ಯಾಪಾರ ಪ್ರಾರಂಭಿಸಿದ್ದ. ಇವನ ಕಿರಿಯ ಸಹೋದರ ರಿಯಾಜ್‌ ಭಟ್ಕಳ್‌ ಉರುಫ್ ರೋಶನ್ ಜಮಾಲ್, ಇಂಡಿಯನ್‌ ಮುಜಾಹಿದೀನ್‌ (ಐಎಂ) ಸಂಘಟನೆಯ ಸ್ಥಾಪಕ ಎಂದು ಹೇಳಲಾಗಿದೆ. ಇದೇ ಸಂಘಟನೆ ಮೊನ್ನೆಯ ಮುಂಬೈ ತ್ರಿವಳಿ ಸ್ಫೋಟಕ್ಕೆ ಕಾರಣವೆನ್ನಲಾಗಿದೆ.

ತಲೆಮರೆಸಿಕೊಂಡಿರುವ ಇಬ್ಬರೂ ಸಹೋದರರನ್ನು ಮಹಾರಾಷ್ಟ್ರ ಉಗ್ರ ನಿಗ್ರಹ ಪಡೆ ಪೊಲೀಸರು ಬೇಟೆಯಾಡುತ್ತಿದ್ದಾರೆ. 2006ರ ತನಕ ಇಕ್ಬಾಲ್‌ ಮತ್ತು ರಿಯಾಜ್‌ ಕುರ್ಲಾದ ಖಾದಿರ್ ಬಿಲ್ಡಿಂಗ್‌ನಲ್ಲಿ ವಾಸಿಸುತ್ತಿದ್ದರು. ಈಗ ಫ್ಲಾಟಿಗೆ ಬೀಗ ಹಾಕಲಾಗಿದೆ. ಈ ಬಿಲ್ಡಿಂಗ್‌ನಲ್ಲಿರುವ ಭಟ್ಕಳ ಸಹೋದರರ ಫ್ಲಾಟಿಗೆ ಪೊಲೀಸರು ಆಗಾಗ ಹಠಾತ್‌ ಭೇಟಿ ನೀಡುತ್ತಿರುತ್ತಾರೆ. ಅಕ್ಕಪಕ್ಕದ ಫ್ಲಾಟಿನವರಿಗೆ ಪೊಲೀಸರ ಆಗಮನ ಮಾಮೂಲಿಯಾಗಿ ಹೋಗಿದೆ.

English summary
The second most important man in the Indian Mujahideen hierarchy in Mumbai failed to get a diploma in construction technology even after 18 attempts. Iqbal Bhatkal finally gave up and started selling ittar and perfumes at Manish Market in south Mumbai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X