ಭಾಕ್ರಾ ನಾಂಗಲ್ ಡ್ಯಾಮ್ ಉಡಾಯಿಸಲು ಉಗ್ರರ ಸಂಚು

ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್-ಇ-ತೊಯ್ಬಾ ಮತ್ತು ಜಮಾತ್ ಉದ್ ದಾವಾಗಳು ಜಂಟಿಯಾಗಿ ಈ ಕಾರ್ಯಾಚರಣೆಗೆ ಇಳಿಯುವ ಸಾಧ್ಯತೆಯಿದೆ. ಕೂಡಲೆ ಅಣೆಕಟ್ಟಗೆ ಬಿಗಿ ಭದ್ರತೆ ಒದಗಿಸಬೇಕೆಂಬ ಸಂದೇಶ ರವಾನೆಯಾಗಿದೆ.
ಮಳೆಗಾಲದ ಸಮಯದಲ್ಲಿ ಅಣೆಕಟ್ಟೆಯಲ್ಲಿ ನೀರು ತುಂಬಿ ತುಳುಕುತ್ತಿರುವ ಸಮಯದಲ್ಲಿ ಈ ದುಷ್ಕೃತ್ಯ ನಡೆಸಲು ಯೋಜಿಸಲಾಗಿದ್ದು, ಕೂಡಲೆ ಭದ್ರತಾ ವ್ಯವಸ್ಥೆ ಮಾಡಬೇಕೆಂದು ಹಿಮಾಚಲ ಪ್ರದೇಶ ಸರಕಾರಕ್ಕೆ ಆದೇಶ ನೀಡಲಾಗಿದೆ.
ಭಯೋತ್ಪಾದಕರಿಗೆ ಪಾಕಿಸ್ತಾನದಲ್ಲಿ ಗೋಡೆ ಹತ್ತುವ ಮತ್ತು ಈಜುವ ತರಬೇತಿ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ಡ್ಯಾಮ್ ಒಡೆದರೆ ಪಂಜಾಬ್, ಹರ್ಯಾಣಾ ಮತ್ತು ದೆಹಲಿ ರಾಜ್ಯಗಳಲ್ಲಿ ಬೆಳೆ ಮತ್ತು ಜನರಿಗೆ ಅಪಾರ ಹಾನಿ ಸಂಭವಿಸಲಿದೆ.
ಮುಂಬೈನಲ್ಲಿ ಜು.13ರಂದು ಭೀಕರ ಸರಣಿ ಸ್ಫೋಟ ನಡೆದಿರುವ ಬೆನ್ನ ಹಿಂದೆಯೇ ಮತ್ತೊಂದು ಆಪತ್ತು ಬಂದು ನಿಂತಿದೆ. ಈಗಲೇ ಎಚ್ಚರಿಕೆ ವಹಿಸದಿದ್ದರೆ ಅಪಾರ ಹಾನಿಯಾಗುವುದು ಖಚಿತ.











Click it and Unblock the Notifications