ಭಕ್ತರ ದರ್ಶನಕ್ಕೆ ಪುಟ್ಟಪರ್ತಿ ಸಾಯಿಬಾಬಾ ಸಮಾಧಿ
ಪುಟ್ಟಪರ್ತಿ,
ಜು.16: ಇಲ್ಲಿನ ಪ್ರಶಾಂತಿ ನಿಲಯಂನಲ್ಲಿ ನಿರ್ಮಿಸಲಾಗಿರುವ ಸತ್ಯ ಸಾಯಿ ಬಾಬಾ ಅವರ ಮಹಾ ಸಮಾಧಿಯನ್ನು ಗುರುಪೂರ್ಣೆಯ ಶುಭ ಶುಕ್ರವಾರ ಭಕ್ತರ ದರ್ಶನಕ್ಕೆ ತೆರೆಯಲಾಗಿದೆ. ಪುಟ್ಟಪರ್ತಿಯಲ್ಲಿ ಈಗ ಮತ್ತೆ ಭಕ್ತ್ತರ ದಂಡು ಹರಿದುಬರುತ್ತಿದ್ದು ಹಬ್ಬದ ಸಂಭ್ರಮ ನೆಲೆಗೊಂಡಿದೆ. id="toptextpromo">ಪ್ರಶಾಂತಿ
ನಿಲಯಂನ ಸಾಯಿ ಕುಲ್ವಂತ್ ಸಭಾಂಗಣದಲ್ಲಿ ಸಹಸ್ರಾರು ಭಕ್ತರು ಸೇರಿದ್ದು, ಬಾಬಾ ಅವರ ಮಹಾ ಸಮಾಧಿಯ ದರ್ಶನ ಪಡೆದರು. ಸಾಯಿ ಬಾಬಾ ಅವರು ಇದೇ ಸಭಾಂಗಣದಲ್ಲಿ ಭಕ್ತರಿಗೆ ದರ್ಶನ ನೀಡುತ್ತಿದ್ದರು. ಆಯಾತಕಾರದಲ್ಲಿ ನಿರ್ಮಿಸಿರುವ ಮಹಾಸಮಾಧಿ ಶುಭ್ರವಾದ ಬಿಳಿ ಬಣ್ಣದ ಅಮೃತ ಶಿಲೆಯಿಂದ ಕೂಡಿದೆ. id='are-slot-1' class='oiad oi-axt oiadv'> id='top-searched-articles'>ಏಪ್ರಿಲ್
24ರಂದು ಅಸ್ತಂಗತರಾದ ಸಾಯಿ ಬಾಬಾ ಅವರನ್ನು ಏ.27ರಂದು ಸಂಸ್ಕಾರ ಮಾಡಲಾಗಿತ್ತು. ಸಾಯಿ ಬಾಬಾ ಅವರ ಸಮಾಧಿ ದರ್ಶನಕ್ಕಾಗಿ ಭಕ್ತರು ಕಾತುರದಿಂದ ನಿರೀಕ್ಷಿಸುತ್ತಿದ್ದರು. ಶುಕ್ರವಾರ ಮಹಾಸಮಾಧಿಯನ್ನು ಕಣ್ತುಂಬಿಕೊಂಡ ಭಕ್ತರು ಪುಳಕಗೊಂಡರು. (ಪಿಟಿಐ)











Click it and Unblock the Notifications