ಗದಗ ಪೋಸ್ಕೊ ಹೋಯ್ತು ಯಾದಗಿರಿ ಯುರೇನಿಯಂ ಬಂತು, ಡುಂ ಡುಂ ...

yeddyurappa
ಬೆಂಗಳೂರು, ಜುಲೈ15: ವಿವಾದಗಳು ಯಡಿಯೂರಪ್ಪ ನೇತೃತ್ವದ ಸರಕಾರವನ್ನು ಬೆನ್ನೇರಿ ಬರುತ್ತಿವೆ. ವಿವಾದಾತ್ಮಕ ಯುರೇನಿಯಂ ಗಣಿಗಾರಿಕೆಗೆ ರಾಜ್ಯ ಸರ್ಕಾರ ಅಸ್ತು ಎಂದಿರುವ ವಿವಾದಕ್ಕೆ ಎಡೆಯಾಗಿದೆ. ಯುರೇನಿಯಂ ಗಣಿಗಾರಿಕೆಗೆ ಅನುಮತಿ ನೀಡಲು ಈ ಹಿಂದೆ ಬಿಜೆಪಿ ನಾಯಕರೇ ವಿರೋಧ ವ್ಯಕ್ತಪಡಿಸಿದ್ದರು ಎಂಬುದು ಗಮನಾರ್ಹ.

ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಗೋಗಿ ಬಳಿ ಒಟ್ಟು 40 ಎಕರೆ ಪ್ರದೇಶದಲ್ಲಿ ಯುರೇನಿಯಂ ಹೊರತೆಗೆಯುವ ಸಂಬಂಧ ಯುರೇನಿಯಂ ಕಾರ್ಪೊರೇಷನ್‌ ಆಫ್ ಇಂಡಿಯಾಕ್ಕೆ ಅನುಮತಿ ನೀಡಲು ಗುರುವಾರ ನಡೆದ ಮುಖ್ಯಮಂತ್ರಿಗಳ ನೇತೃತ್ವದ ರಾಜ್ಯ ಉನ್ನತ ಮಟ್ಟದ ಸಮಿತಿ ನಿರ್ಧರಿಸಿದೆ.

ಕಳೆದ ವರ್ಷ ವಿಧಾನಪರಿಷತ್ತಿನಲ್ಲಿ ನಡೆದ ಚರ್ಚೆ ಸಂದರ್ಭ ಬಿಜೆಪಿಯ ಶಶಿಲ್‌ ನಮೋಶಿ ಸೇರಿದಂತೆ ಹಲವು ಸದಸ್ಯರು ಈ ಘಟಕ ಸ್ಥಾಪನೆಯಿಂದ ವಿಕಿರಣದ ಅಪಾಯವಿದೆ ಎಂಬ ಕಾರಣಕ್ಕಾಗಿ ಆ ಭಾಗದ ಜನತೆ ಆತಂಕಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದ್ದರು.

ಆದರೆ, ಗುರುವಾರದ ಸಭೆಯ ನಂತರ ಈ ಘಟಕ ಸ್ಥಾಪಿಸಲು ಅನುಮತಿ ನೀಡಿರುವ ಬಗ್ಗೆ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಮಾತ್ರ ಚಕಾರ ಎತ್ತಲಿಲ್ಲ.

ಈ ಯುರೇನಿಯಂ ಘಟಕಕ್ಕಾಗಿ ಯುರೇನಿಯಂ ಕಾರ್ಪೊರೇಷನ್‌ ಆಫ್ ಇಂಡಿಯಾ 550 ಕೋಟಿ ರೂ. ಬಂಡವಾಳ ಹೂಡಲಿದ್ದು, 1.50 ಲಕ್ಷ ಟನ್‌ನಷ್ಟು ಯುರೇನಿಯಂ ಹೊರತೆಗೆಯಲು ಉದ್ದೇಶಿಸಿದೆ. ಈ ಯುರೇನಿಯಂ ಅನ್ನು ಅಣು ಬಾಂಬ್‌, ಅಣು ವಿದ್ಯುತ್‌ ತಯಾರಿಸುವಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ.

ಗೋಗಿಯಲ್ಲಿ ಯುರೇನಿಯಂ ಅನ್ನು ಕಚ್ಚಾ ರೂಪದಲ್ಲಿ ಹೊರತೆಗೆದು ಅದನ್ನು ಸಂಸ್ಕರಣೆಗೆ ಹೈದ್ರಾಬಾದ್‌ಗೆ ಕಳುಹಿಸಲಾಗುತ್ತದೆ. 2007ರಲ್ಲಿ ಗೋಗಿಯಲ್ಲಿ ಯುರೇನಿಯಂ ನಿಕ್ಷೇಪ ಪತ್ತೆ ಹಚ್ಚುವ ಸಂಬಂಧ ಕೇಂದ್ರ ಸರ್ಕಾರ ಯುರೇನಿಯಂ ಕಾರ್ಪೊರೇಷನ್‌ ಆಫ್ ಇಂಡಿಯಾಗೆ ಅನುಮತಿ ನೀಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+