ಬಾಲಕಿ ಕಿಡ್ನಾಪ್ 18 ವರ್ಷ ರೇಪ್ ಅಮೆರಿಕದಲ್ಲಿ ಮಾತ್ರ
ಕ್ಯಾಲಿಫೋರ್ನಿಯಾ
ಜು 13: ಈ ಒಂದು ಸುದ್ದಿ ಕೇಳಿ ಇಡೀ ಪ್ರಾಂತ್ಯವೇ ಬೆಚ್ಚಿಬಿದ್ದಿದೆ. ಜೇಸಿ ಡುಗಾರ್ಡ್ ಹೊರ ತಂದಿರುವ ಪುಸ್ತಕದಲ್ಲಿರುವ ವಿಷಯಗಳನ್ನು ನಾಗರೀಕ ಸಮಾಜ ಅರಗಿಸಿಕೊಳ್ಳಲು ಆಗದೆ ಹೆಣಗಾಡುತ್ತಿದೆ. ನಾನು 11 ವರ್ಷವಿದ್ದಾಗ ನನ್ನನ್ನು ಕಿಡ್ನಾಪ್ ಮಾಡಿ, ಸತತ 18 ವರ್ಷಗಳ ಕಾಲ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಲಾಗಿದೆ ಎಂದು ಜೇಸಿ ಎಂಬುವಳು ತನ್ನ ಪುಸ್ತಕದಲ್ಲಿ ಹೇಳಿಕೊಂಡಿದ್ದಾಳೆ. id="toptextpromo">1991ರಲ್ಲಿ
ಈ ಘಟನೆ ನಡೆದಿದ್ದು, ಫಿಲಿಫ್ ಹಾಗೂ ಆತನ ಪತ್ನಿ ನ್ಯಾನ್ಸಿ ಗಾರ್ರಿಡೋ ಪ್ರಮುಖ ಆರೋಪಿಗಳು. ಜೇಸಿಯನ್ನು ತಮ್ಮ ಹಿತ್ತಲ್ಲಿನಲ್ಲಿ ಕೂಡಿ ಹಾಕಿದ್ದರಂತೆ. ಜೇಸಿ ಎರಡು ಮಕ್ಕಳಿಗೂ ಜನ್ಮ ನೀಡಿದ್ದಾಳೆ. 2009 ರಲ್ಲಿ ಬಂಧಮುಕ್ತಳಾದ ಜೇಸಿ, ಮಕ್ಕಳಿಗಾಗಿ ಬದುಕುವ ಆಸೆ ನನ್ನನು ಇನ್ನೂ ಜೀವಂತವಾಗಿರಿಸಿದೆ. id='are-slot-1' class='oiad oi-axt oiadv'> id='top-searched-articles'>ಭಾವನೆಗಳನ್ನು
ಅದುಮಿಡಲು ಸಾಧ್ಯವಿಲ್ಲ.ನಾನು ಯಾವುದೇ ತಪ್ಪು ಮಾಡದ ಮೇಲೆ ರಹಸ್ಯವನ್ನು ಉಳಿಸಿಕೊಳ್ಳುವುದಾದರೂ ಏಕೆ. ದುರಂತಮಯ ಈ ಜೀವನದ ವಿವರ ಇತರರಿಗೂ ತಿಳಿಯಲಿ ಎಂದು ಪುಸ್ತಕ ರೂಪದಲ್ಲಿ ಎಲ್ಲವನ್ನೂ ಹೇಳಿರುವೆ ಎಂದು ಜೇಸಿ ಹೇಳಿದ್ದಾಳೆ. ಇಬ್ಬರೂ ಆರೋಪಿಗಳು ಸದ್ಯ ಜೈಲಿನಲ್ಲಿದ್ದಾರೆ. ಜೇಸಿ ಮಕ್ಕಳ ಬಗ್ಗೆ ಯಾವುದೇ ಮಾಹಿತಿ ಸ್ಪಷ್ಟವಾಗಿ ಲಭ್ಯವಿಲ್ಲ.











Click it and Unblock the Notifications