ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೋಸ್ಕೊ ಭೂಸ್ವಾಧೀನ: ರೈತ ಹೋರಾಟಕ್ಕೆ ರಾಹುಲ್ ಸಾಥ್

By Srinath
|
Google Oneindia Kannada News

Rahul Gandhi to support Karnataka farmers
ಬೆಂಗಳೂರು, ಜುಲೈ 12: ಪೋಸ್ಕೊಗಾಗಿ ಭೂಸ್ವಾಧೀನ ವಿರುದ್ಧದ ರೈತರ ಹೋರಾಟಕ್ಕೆ ಹೊಸ ಶಕ್ತಿ ತುಂಬಲು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಗದಗ ಜಿಲ್ಲೆಯ ಹಳ್ಳಿಗುಡಿ ಹಾಗೂ ಇತರ ಗ್ರಾಮಗಳಿಗೆ ಸದ್ಯದಲ್ಲೇ ಭೇಟಿ ನೀಡುವ ಸಂಭವವಿದೆ.

ರಾಹುಲ್ ಆಪ್ತ ಮೂಲಗಳ ಪ್ರಕಾರ, ರಾಜ್ಯದ ಬಿಜೆಪಿ ಸರ್ಕಾರವು 7,000ಕ್ಕೂ ಹೆಚ್ಚು ಎಕರೆ ಭೂಸ್ವಾಧೀನಕ್ಕೆ ಯತ್ನಿಸುತ್ತಿರುವ ಹಳ್ಳಿಗುಡಿ, ಮೇವುಂಡಿ, ಹಾಗೂ ಜಂತ್ಲಿ-ಶಿರೂರ ಗ್ರಾಮಗಳಿಗೆ ರಾಹುಲ್ ಸದ್ಯದಲ್ಲಿಯೇ ಭೇಟಿ ನೀಡಲಿದ್ದಾರೆ. ಸದ್ಯ ಉತ್ತರ ಪ್ರದೇಶ, ಒರಿಸ್ಸಾ, ಮಧ್ಯಪ್ರದೇಶ ರಾಜ್ಯಗಳ ಪ್ರವಾಸದಲ್ಲಿರುವ ಅವರು, ಈ ತಿಂಗಳ 25ರ ನಂತರ ಗದಗಕ್ಕೆ ಭೇಟಿ ನೀಡುವ ಸಾಧ್ಯತೆಗಳಿವೆ.

'ಗದಗದಲ್ಲಿ ಪೋಸ್ಕೊ ಸ್ಥಾಪಿಸಲು ಉದ್ದೇಶಿಸಿರುವ ಕೈಗಾರಿಕಾ ಘಟಕದ ಬಗ್ಗೆ ಸರ್ಕಾರ ಆ ಕಂಪೆನಿಗೆ ವಿಧಿಸಿರುವ ಷರತ್ತುಗಳು, ಯೋಜನೆಯಿಂದ ಪರಿಸರದ ಮೇಲೆ ಹಾಗೂ ರೈತರ ಜೀವನದ ಮೇಲಾಗುವ ಪರಿಣಾಮಗಳ ಕುರಿತು ಎಐಸಿಸಿ ಮುಖಂಡರು ಮಾಹಿತಿ ಕಲೆಹಾಕುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಮುಖಂಡರು ಸಂಬಂಧಿಸಿದ ಸಂಘಟನೆಗಳೊಡನೆ ಈಗಾಗಲೇ ಸಂಪರ್ಕದಲ್ಲಿದ್ದಾರೆ' ಎಂದು ಅವರು ತಿಳಿಸಿದರು.

'ರೈತರ ಸಮಸ್ಯೆಗಳು ಹಾಗೂ ಭಾರಿ ಕೈಗಾರಿಕೆಗಳಿಂದ ಅವರ ಜೀವನದ ಮೇಲಾಗುತ್ತಿರುವ ಪರಿಣಾಮಗಳ ಕುರಿತು ರಾಹುಲ್ ಕಾಳಜಿ ಹೊಂದಿದಾರೆ. ತಮ್ಮ ಬಿಡುವಿಲ್ಲದ ವೇಳಾಪಟ್ಟಿ ನಡುವೆಯೂ ಅವರು ಖಂಡಿತ ಗದಗಕ್ಕೆ ಭೇಟಿ ನೀಡಲಿದ್ದಾರೆ. ರಾಹುಲ್ ಅವರ ಈ ಭೇಟಿಯಿಂದ, ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ, ಈಗ ಬಿಜೆಪಿ ಹಿಡಿತದಲ್ಲಿರುವ ಗದಗದಲ್ಲಿ ಪಕ್ಷ ಬಲವರ್ಧನೆಗೂ ಇದು ಮಹತ್ವದ ಹೆಜ್ಜೆಯಾಗಲಿದೆ' ಎಂದರು

English summary
The Karnataka Congress is all set to toe the line taken by its national leader Rahul Gandhi against forceful farm land acquisition by extending its support to the agitation against the proposed Posco steel plant at Halligudi village in Gadag district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X