ಮಂಗಳೂರು ವಿಮಾನ ನಿಲ್ದಾಣಕ್ಕೆ ವೊಲ್ವೊ ಬಸ್

ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೇಮಾರ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಮಂಗಳೂರು ವಿಭಾಗದ ಅಧಿಕಾರಿಗಳಿಂದ ಬಸ್ ಸೇವೆ ಆರಂಭಿಸುವ ಭರವಸೆ ಸಿಕ್ಕಿದೆ.
ಆರಂಭದಲ್ಲಿ ಈ ಸೇವೆ ಮಂಗಳೂರು ಸರ್ಕಾರಿ ಬಸ್ ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಸೀಮಿತವಾಗಿರುತ್ತದೆ. ಮುಂದಿನ ದಿನಗಳಲ್ಲಿ ಬೇಡಿಕೆ ಬಂದರೆ ಉಳಿದ ಸ್ಥಳಗಳಿಗೂ ವಿಸ್ತರಿಸುವ ಭರವಸೆ ಅಧಿಕಾರಿಗಳಿಂದ.
ವಿಮಾನ ನಿಲ್ದಾಣಕ್ಕೆ ವೊಲ್ವೊ ಬಸ್ ಸೇವೆ ಆರಂಭವಾಗುತ್ತಿರುವುದನ್ನು ವಿಮಾನಗಳಲ್ಲಿ ಪ್ರಯಾಣಿಸುವ ಮಧ್ಯಮ ವರ್ಗದವರು ಸ್ವಾಗತಿಸಿದರೆ ಟ್ಯಾಕ್ಸಿ ಚಲಾಯಿಸುವವರು ಮಾತ್ರ ಆಕ್ಷೇಪಿಸುತ್ತಿದ್ದಾರೆ.












Click it and Unblock the Notifications