ಕೋಣನಕುಂಟೆಯಲ್ಲಿ ರವಿ ಪೂಜಾರಿ ಬಂಟರ ಬಂಧನ
ಬೆಂಗಳೂರು,
ಜುಲೈ 11: ಭೂಗತ ಪಾತಕಿ ರವಿ ಪೂಜಾರಿಯ ಮೂವರು ಸಹಚರರನ್ನು ಬೆಂಗಳೂರು ಸಿಸಿಬಿ ಪೊಲೀಸರು ಕೋಣನಕುಂಟೆಯಲ್ಲಿ ಬಂಧಿಸಿದ್ದಾರೆ. ಕೇಶವ ಪ್ರಸಾದ್, ರಾಘವೇಂದ್ರ ಮತ್ತು ನರಸಿಂಹ ಮೂರ್ತಿ ಬಂಧಿತ ಪಾತಕಿಗಳು. id="toptextpromo">ಶನಿವಾರ
ರಾತ್ರಿ ಕೋಣನಕುಂಟೆಯಲ್ಲಿ ಪೂಜಾರಿಯ ಸಹಚರರು ಮಾರುತಿ ಕಾರಿನಲ್ಲಿ ಸಂಚರಿಸುತ್ತಿರುವುದರ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಮಿಂಚಿನ ದಾಳಿ ಮಾಡಿ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತರು ರಾಜ್ಯದ ಪ್ರಮುಖ ಬಿಲ್ಡರುಗಳು, ವ್ಯಾಪಾರಿಗಳ ಫೋನ್ ನಂಬರ್ ಗಳನ್ನು ಗುಪ್ತವಾಗಿ ಪಡೆದುಕೊಂಡು ಅದನ್ನು ರವಿ ಪೂಜಾರಿಗೆ ನೀಡುತ್ತಿದ್ದರು. id='are-slot-1' class='oiad oi-axt oiadv'> id='top-searched-articles'>ಮಲೇಷ್ಯಾದಿಂದ
ತನ್ನ ಚಟುವಟಿಕೆ ನಡೆಸುವ ಪೂಜಾರಿ, ಆ ಸಂಖ್ಯೆಗಳಿಗೆ ಫೋನ್ ಮಾಡಿ ಬೆದರಿಸುತ್ತಿದ್ದ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. ಬೆಂಗಳೂರು ಕನಕಪುರ ರಸ್ತೆಯಲ್ಲಿರುವ ಕೋಣನಕುಂಟೆ ವಿಶ್ವ ಪ್ರಸಿದ್ಧ. ರಾಜೀವ್ ಗಾಂಧಿಯ ಕೊಲೆಗಡುಕರ ತಂಡ (ಶಿವರಸನ್, ಶುಭಾ ಮತ್ತಿತರರು) ಎಸ್ ಟಿಎಫ್ ಬಲೆಗೆ ಬಿದ್ದಿದ್ದು ಈ ಬಡಾವಣೆಯಲ್ಲಿಯೇ.











Click it and Unblock the Notifications