ಕೊಲೆ ಮಾಡೋದರಲ್ಲಿ ಮಹಿಳೆಯರೇ ಎತ್ತಿದ ಕೈ
ನವದೆಹಲಿ
ಜು 11: ಪುರುಷರಿಗೆ ಎಲ್ಲಾ ವಿಷಯಗಳಲ್ಲೂ ಪೈಪೋಟಿ ನೀಡಿ ಸಾಧನೆ ಮೆರೆಯುತ್ತಿರುವ ಮಹಿಳೆಯರು ತಾವು ಅಬಲೆಯಲ್ಲ, ಸಬಲೆ ಎಂದು ಸಾಬೀತು ಮಾಡುತ್ತಿರುವುದು ಸಂತೋಷದ ವಿಷಯ. ಆದರೆ, ಪುರುಷರಿಗಿಂತ ಮಹಿಲೆಯರು ಕೊಲೆ ಮಾಡುವುದರಲ್ಲಿ ಎತ್ತಿದ ಕೈ ಎಂದು ತಿಹಾರ್ ಜೈಲಿನ 2010-11ರ ವರದಿ ಆತಂಕಕಾರಿಯಾಗಿದೆ. 30 ರಿಂದ 50ರ ಹರೆಯದ ವಯೋಮಿತಿಯ ಸಕತ್ ಡೇಂಜರ್ ಮಹಿಳಾ ಕೈದಿಗಳು ತಿಹಾರ್ ಜೈಲಿನಲ್ಲಿದ್ದಾರೆ. id="toptextpromo">2011
ರ ಸಮೀಕ್ಷೆ ಪ್ರಕಾರ ತಿಹಾರ್ ಜೈಲಿನಲ್ಲಿರುವ 2,751 ಕೈದಿಗಳ ಪೈಕಿ ಮಹಿಳಾ ಕೈದಿಗಳಲ್ಲಿ ಶೇ 46.15 ಮಂದಿ ಕೊಲೆ ಮಾಡಿ ಜೈಲು ಸೇರಿದವರಾಗಿದ್ದಾರೆ. ಪುರುಷ ಕೊಲೆಗಾರರು ಕೇವಲ ಶೇ 33.47 ಮಾತ್ರ ಇದ್ದಾರೆ. ಕೊಲೆ ಪ್ರಯತ್ನದಲ್ಲಿ ಸಿಕ್ಕಿ ಬಿದ್ದವರ ಸಂಖ್ಯೆಯಲ್ಲೂ ಮಹಿಳೆಯರೇ ಮೇಲುಗೈ ಸಾಧಿಸಿದ್ದಾರೆ. ಶೇ 6.73 ರಷ್ಟು ಮಹಿಳೆಯರು ಕೊಲೆ ಪ್ರಯತ್ನದ ಅಪರಾಧಿಗಳಾಗಿದ್ದರೆ, ಪುರುಷರ ಸಂಖ್ಯೆ ಕೇವಲ ಶೇ 5.93 ಮಾತ್ರ. id='are-slot-1' class='oiad oi-axt oiadv'> id='top-searched-articles'>ಇದು
ಇಷ್ಟಕ್ಕೆ ನಿಲ್ಲುವುದಿಲ್ಲ, ಕಿಡ್ನಾಪ್, ಸೈಕೊ ಕೇಸ್ ಗಳಲ್ಲಿ ಅಲ್ಲದೆ ಶೇ 7.69 ರಷ್ಟು ರೇಪ್ ಕೇಸ್ ಗಳಲ್ಲಿ ಮಹಿಳೆಯರು ಭಾಗಿಗಳಾಗಿರುವುದು ಹಲವರ ಹುಬ್ಬೇರಿಸಿದೆ. ಸೆಂಟ್ರಲ್ ಜೈಲ್(ಜೈಲು ಸಂಖ್ಯೆ 6) ಮಹಿಳೆಯರಿಗೆ ಮೀಸಲಾಗಿದೆ. 401 ವಿಚಾರಣಾಧೀನ ಕೈದಿಗಳು ಹಾಗೂ 104 ವಿದೇಶಿ ಮಹಿಳಾ ಕೈದಿಗಳು ಇಲ್ಲಿದ್ದಾರೆ ಎಂದು ಬಂದಿಖಾನೆ ಇಲಾಖಾಧಿಕಾರಿ ನೀರಜ್ ಕುಮಾರ್ ತಿಳಿಸಿದ್ದಾರೆ.











Click it and Unblock the Notifications