ಸರ್ಕಾರದ ವರ್ಚಸ್ಸು ಅರಸಿ ಯಡಿಯೂರಪ್ಪ ಹೊರಟರು ದೆಹಲಿಯತ್ತ

ಮಾಧ್ಯಮಗಳು ಪ್ರಮುಖವಾಗಿ ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ಸದಸ್ಯರು ಭಾಗಿಯಾಗಿದ್ದಾರೆ ಎನ್ನಲಾದ ಹಗರಣಗಳ ಮೇಲೆ ಬೆಳಕು ಚೆಲ್ಲುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಸಾಧನೆಯನ್ನು ಬಿಂಬಿಸುವ ಮೂಲಕ ಜನರಲ್ಲಿ ಹಾಗೂ ರಾಜಕೀಯ ವಲಯದಲ್ಲಿ ಮೂಡಿರುವ ತಪ್ಪು ಅಭಿಪ್ರಾಯ ನಿವಾರಿಸುವ ನಿಟ್ಟಿನಲ್ಲಿ ಈ ಪ್ರಹಸನ ಅತ್ಯಗತ್ಯ ಎಂಬ ಸಲಹೆಯನ್ನು ಬಿಜೆಪಿ ಮುಖಂಡರು ಮುಖ್ಯಮಂತ್ರಿಗೆ ನೀಡಿದ್ದಾರೆ.
ಸಚಿವ ಸಹದ್ಯೋಗಿಗಳ ದಂಡಿನೊಂದಿಗೆ ಸೋಮವಾರ ರಾತ್ರಿ ದೆಹಲಿಗೆ ಬರಲಿರುವ ಮುಖ್ಯಮಂತ್ರಿ ಮಂಗಳವಾರ ಅಥವಾ ಬುಧವಾರ ಪ್ರತಿಷ್ಠಿತ ಪಂಚಾತಾರ ಹೋಟೆಲ್‌ನಲ್ಲಿ ರಾಷ್ಟ್ರದ ಮಾಧ್ಯಮಗಳ ಮುಂದೆ ತಮ್ಮ ಸರ್ಕಾರದ ಮೂರು ವರ್ಷಗಳ ಸಾಧನೆಯನ್ನು ವಿವರಿಸಲಿದ್ದಾರೆ.
ಮುಖ್ಯಮಂತ್ರಿ ದೆಹಲಿ ಯಾತ್ರೆ ಯಶಸ್ವಿಗೊಳಿಸಲು ಮತ್ತು ಅಗತ್ಯ ಸಿದ್ಧತೆಗಳನ್ನು ಮಾಡಲು ಅವರ ನಿಷ್ಠಾವಂತ ಸಚಿವರಲ್ಲಿ ಒಬ್ಬರಾದ ಶೋಭಾ ಕರಂದ್ಲಾಜೆ ಈಗಾಗಲೇ ರಾಜಧಾಯತ್ತ ಮುಖಮಾಡಿದ್ದಾರೆ. ಪತ್ರಿಕಾಗೋಷ್ಠಿಗಾಗಿ ಮುಖ್ಯಮಂತ್ರಿ ಕಚೇರಿ ಈಗಾಗಲೇ ಪ್ರತಿಷ್ಠಿತ ಪಂಚತಾರ ಹೋಟೆಲ್ ಬುಕ್ ಆಗಿದೆ. ಕನಿಷ್ಠ ಪಕ್ಷ 150 ವರದಿಗಾರರಾದರೂ ಗೋಷ್ಠಿಯಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು ಎಂಬ ಕಟ್ಟುನಿಟ್ಟಿನ ಸಂದೇಶ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯದ ಮುಖ್ಯ ಕಾರ್ಯದರ್ಶಿ ಎಸ್. ವಿ. ರಂಗನಾಥ್ ಸರ್ಕಾರದ ವಿವಿಧ ಸಾಧನೆಗಳನ್ನು ಕುರಿತು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮಾಡಲಿದ್ದಾರೆ.












Click it and Unblock the Notifications