ಕುಮಾರಸ್ವಾಮಿ ಉಪವಾಸಕ್ಕೆ ಬಳ್ಳಾರಿಯಲ್ಲಿ ಸ್ಪಂದನ

JDS activists protest in Bellary
ಬಳ್ಳಾರಿ, ಜು. 9 : ಬಿಜೆಪಿ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜೆಡಿಎಸ್ ವರಿಷ್ಠರ ವಿರುದ್ಧ ಮಾಡಿರುವ ಅಕ್ರಮ ಆಸ್ತಿ ಗಳಿಕೆಯ ಆರೋಪದ ಕಳಂಕವನ್ನು ತೊರೆಯಲು ತನಿಖೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿರುವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬೆಂಬಲ ವ್ಯಕ್ತಪಡಿಸಿ, ಜಿಲ್ಲಾ ಜೆಡಿಎಸ್ ಒಂದು ದಿನದ ಸಾಂಕೇತಿಕ ಪ್ರತಿಭಟನೆ ನಡೆಸಿತು.

ಜಿಲ್ಲಾ ಜೆಡಿಎಸ್ ಅಧ್ಯಕ್ಷ, ಮಾಜಿ ಶಾಸಕ ಎನ್. ಸೂರ್ಯನಾರಾಯಣರೆಡ್ಡಿ ಅವರು ಪ್ರತಿಭಟನಾಕಾರನ್ನು ಉದ್ದೇಶಿಸಿ ಮಾತನಾಡಿ, ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಸೇರಿ ಅವರ ಕುಟುಂಬದ ಎಲ್ಲಾ ಸದಸ್ಯರ ವಿರುದ್ಧ ಅಕ್ರಮ ಆಸ್ತಿಗಳಿಕೆ ಮತ್ತು ಇನ್ನಿತರೆ ಆರೋಪಗಳ ಮೂಲಕ ಬಿಜೆಪಿ ಮತ್ತು ಯಡಿಯೂರಪ್ಪ ಅವರು, ದೇವೇಗೌಡರ ಕುಟುಂಬಕ್ಕೆ ಕಳಂಕ ಅಂಟಿಸಿದ್ದಾರೆ ಎಂದರು.

ಈ ಆರೋಪ ರಾಜಕೀಯ ಆರೋಪವಾಗಿಲ್ಲ. ಕುಟುಂಬದ ವರ್ಚಸ್ಸು - ಗೌರವ; ಪ್ರತಿಷ್ಠೆಗಳಿಗೆ ಸಂಬಂಧಿಸದ್ದಾಗಿದೆ. ಅಲ್ಲದೇ, ಮುಂದಿನ ಪೀಳಿಗೆ ಕೂಡ ಈ ವಿಚಾರವನ್ನು ಪದೇ ಪದೇ ಪ್ರಸ್ತಾಪಿಸಿ ಇಡೀ ಕುಟುಂಬವನ್ನು ಗೇಲಿ ಮಾಡುವ, ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಗಳಿವೆ. ಕಾರಣ ಈ ಕುಟುಂಬ ಈ ಆರೋಪದ ಕಳಂಕದಿಂದ ಮುಕ್ತವಾಗಲು ಬಿಜೆಪಿ ಮಾಡಿರುವ ಎಲ್ಲಾ ಆರೋಪಗಳ ತನಿಖೆ ನಡೆಯಬೇಕು ಎಂದರು.

ನಿವೃತ್ತ ಐಎಎಸ್ ಅಧಿಕಾರಿ, ದಕ್ಷತೆ, ಪ್ರಮಾಣಿಕತೆಗೆ ಖ್ಯಾತರಾಗಿರುವ ಬಾಲಸುಬ್ರಮಣಿಯನ್ ನೇತೃತ್ವದ ಟಾಸ್ಕ್‌ಪೋರ್ಸ್ ಸಲ್ಲಿಸಿರುವ ಭೂ ಒತ್ತುವರಿ ಪ್ರಕರಣವನ್ನು ಸರ್ಕಾರ ಕೂಡಲೇ ತನಿಖೆಗೆ ಒಳಪಡಿಸಲಿ. ಈ ಟಾಸ್ಕ್‌ಫೋರ್ಸ್‌ನ ವರದಿಯ ತನಿಖೆ ಪ್ರಾರಂಭವಾದಲ್ಲಿ ಸರ್ಕಾರದ ಬಂಡವಾಳ ಬಯಲಾಗಲಿದೆ ಎಂದು ಅವರು ಭವಿಷ್ಯ ನುಡಿದರು.

ಜಿಲ್ಲಾ ಜೆಡಿಎಸ್ ಕಚೇರಿಯಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿಗಳ ಕಚೇರಿಯನ್ನು ತಲುಪಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು. ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಾಂಕೇತಿಕ ಪ್ರತಿಭಟನೆ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+