ಶ್ರೀ ರಾಮ ಸೇನೆ ನಿಗೂಢ ಶಸ್ತ್ರಾಸ್ತ್ರ ತರಬೇತಿ ಜಾರಿ

ಕಾರ್ಯಕರ್ತರಲ್ಲಿ ಹೋರಾಟದ ಮನೋವೃತ್ತಿಯನ್ನು ಬೆಳೆಸುವುದು ನನ್ನ ಉದ್ದೇಶ ಎಂದು ಪ್ರಮೋದ್ ಮುತಾಲಿಕೆ ಪ್ರತಿಕ್ರಿಯಿಸಿದ್ದಾರೆ. ಇದು ಭ್ರಷ್ಟಾಚರ ವಿರೋಧಿ ದಳವೋ ಅಥವಾ ಹಿಂದೂ ಆತ್ಮಾಹುತಿ ದಳವೋ ಇನ್ನೂ ಸ್ಪಷ್ಟವಾಗಿಲ್ಲ.
ಪೊಲೀಸರಿಗೆ ಗೊತ್ತಿಲ್ಲ:ರಾಜ್ಯದ 10 ಜಿಲ್ಲೆಗಳ ಸುಮಾರು 180 ಮಂದಿ ಶ್ರೀರಾಮಸೇನಾ ಕಾರ್ಯಕರ್ತರು ನಿವೃತ್ತ ಸೇನಾಧಿಕಾರಿಗಳಿಂದ ಸೇನಾ ಮಾದರಿಯ ಶಸ್ತ್ರಾಸ್ತ್ರ, ಕರಾಟೆ, ಕತ್ತಿವರಸೆಯ ತರಬೇತಿಗ ನೀಡಲಾಗುತ್ತಿದೆ. ಅಥಣಿಯಿಂದ ಸುಮಾರು 10 ಕಿ.ಮೀ ದೂರವಿರುವ ಭೂ ಕೈಲಾಸ ಆಶ್ರಮದ ಸುತ್ತಮುತ್ತ ಹೋಗದಂತೆ ಸಾರ್ವಜನಿಕರಿಗೆ ಹಾಗೂ ಪೊಲೀಸರಿಗೆ ನಿರ್ಬಂಧ ಹೇರಲಾಗಿದೆ ಎಂಬ ವಿಷಯ ಹೊರಬಿದ್ದಿದೆ.
ಬೆಳಗಾವಿ ಜಿಲ್ಲಾಧಿಕಾರಿಗೆ ಹಾಗೂ ಪೊಲೀಸ್ ವರಿಷ್ಠರಿಗೆ ಈ ಕುರಿತು ಸ್ಪಷ್ಟ ಮಾಹಿತಿ ಇಲ್ಲ ಎಂದು ಹೇಳಲಾಗುತ್ತಿದ್ದು, ಯಾರೂ ಕೂಡಾ ಈ ಆಶ್ರಮದ ಸುತ್ತಮುತ್ತ ಸುಳಿಯದಂತೆ ಶ್ರೀರಾಮ ಸೇನೆಯ ಕಾರ್ಯಕರ್ತರು ಕಾವಲಿದ್ದಾರೆ ಎನ್ನಲಾಗಿದೆ.
ರಾಜ್ಯದ ವಿವಿಧ ಕಡೆಗಳಲ್ಲಿ ನಡೆದಿರುವ ಗಲಭೆಗಳಿಗೆ ಪ್ರಚೋದನೆ ನೀಡಿರುವ ಹಾಗೂ ಅಲ್ಪಸಂಖ್ಯಾತರ ವಿರುದ್ಧ ಪಿತೂರಿ ನಡೆಸಿರುವ ಆರೋಪಗಳನ್ನು ಎದುರಿಸುತ್ತಿರುವ ಪ್ರಮೋದ್ ಮುತಾಲಿಕ್, ತಾನು ತಮ್ಮ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುವುದಾಗಿ ಈ ಹಿಂದೆಯೇ ಹೇಳಿದ್ದರು.700 ಜನರ ಆತ್ಮಾಹುತಿ ದಳ ಸಿದ್ಧವಾಗಲಿದೆ ನಂತರ ಇದರ ಸಂಖ್ಯೆ 5 ಸಾವಿರಕ್ಕೆ ಏರಲಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಸಭೆಯಲ್ಲಿ ಬಹಿರಂಗವಾಗಿ ಮುತಾಲಿಕ್ ಘೋಷಿಸಿದ್ದರು.












Click it and Unblock the Notifications