ಗಂಡ ವಿದೇಶದಲ್ಲಿ- ಹೆಂಡತಿ ಕಾರಿನಲ್ಲಿ ಪ್ರಿಯಕರನ ತೆಕ್ಕೆಯಲ್ಲಿ

ಪುತ್ತೂರು ತಾಲೂಕಿನ ಸಂಪ್ಯ ನಿವಾಸಿ ವಿವಾಹಿತ ಅಬ್ದುಲ್ ಅಜೀಝ್ ಹಾಗೂ ಕಂಬಳಬೆಟ್ಟು ದರ್ಗಾ ಸಮೀಪದ ನಿವಾಸಿ, ವಿವಾಹಿತೆ ಆರಿಫಾ ಎಂಬವರೇ ಸಾರ್ವಜನಿಕರಿಗೆ ಸಿಕ್ಕಿಬಿದ್ದ ಜೋಡಿ.
ಅಬ್ದುಲ್ ಅಜೀಝ್ ವಿವಾಹಿತನಾಗಿದ್ದು ಎರಡು ಮಕ್ಕಳನ್ನು ಹೊಂದಿದ್ದಾನೆ. ಆರಿಫಾ ಸಹ ಎರಡು ಮಕ್ಕಳನ್ನು ಹೊಂದಿದ್ದು ಈಕೆಯ ಮಗಳು ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಳೆ. ಈಕೆಯ ಗಂಡ ವಿದೇಶದಲ್ಲಿದ್ದು ಮಗಳು ಮದುವೆಯ ವಯಸ್ಸಿಗೆ ಬಂದಿದ್ದರೂ ಈಕೆಯ ರೊಮ್ಯಾನ್ಸ್ ಮುಂದುವರಿದೇ ಇತ್ತು.
ಸೋಮವಾರ (ಜುಲೈ 4) ಈ ಇಬ್ಬರು ಪುತ್ತೂರು ಕಡೆಯಿಂದ ವಿಟ್ಲ ಮೂಲಕ ಕಲ್ಲಡ್ಕದ ಕಡೆಗೆ ಮಾರುತಿ ಕಾರಿನಲ್ಲಿ ಸಂಚರಿಸುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ಕಂಬಳಬೆಟ್ಟಿನ ಯುವಕರು ಅವರನ್ನು ಗೋಳ್ತಮಜಲು ಎಂಬಲ್ಲಿ ತಡೆದಿದ್ದಾರೆ. ಇಬ್ಬರನ್ನೂ ತೀವ್ರವಾಗಿ ವಿಚಾರಿಸಿದಾಗ ಇಬ್ಬರೂ ವಿವಾಹಿತರೆಂದು ತಿಳಿದು ಬಂದಿದೆ. ಅಜೀಝ್ ಮೇಲೆ ಹಲ್ಲೆ ನಡೆಸಿ ವಿಟ್ಲ ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರಿಫಾಳ ಹೆತ್ತವರನ್ನು ಠಾಣೆಗೆ ಕರೆಯಿಸಿ ಬುದ್ಧಿವಾದ ಹೇಳಿ ಕಳುಹಿಸಿಕೊಡಲಾಗಿದೆ. ಅಜೀಝ್ ನನ್ನು ಹೆಚ್ಚು ವಿಚಾರಣೆಗೊಳಪಡಿಸಿದಾಗ ಈ ಹಿಂದಿನ ಪ್ರಕರಣವೊಂದರಲ್ಲಿ ಪುತ್ತೂರು ಟೌನ್ ಪೊಲೀಸರಿಗೆ ಈತ ಬೇಕಾಗಿದ್ದ ಎಂಬುದು ತಿಳಿದುಬಂದಿದೆ. ವಿಟ್ಲ ಪೊಲೀಸರು ಅಜೀಝ್ ನನ್ನು ಪುತ್ತೂರಿಗೆ ಹಸ್ತಾಂತರಿಸಿದ್ದಾರೆ.












Click it and Unblock the Notifications