ವಿಪ್ರೋ ಕಂಪೆನಿ ಕೆಲ್ಸ ನಕಲಿ ಜಾಲ ಪತ್ತೆ, ನಾಲ್ವರು ಸೆರೆ

Wipro Fake Job racket busted Koramangala
ಬೆಂಗಳೂರು, ಜು. 6: ಪ್ರತಿಷ್ಠಿತ ವಿಪ್ರೋ ಸಾಫ್ಟ್‌ವೇರ್ ಕಂಪೆನಿಯಲ್ಲಿ ಕೆಲಸ ಕೊಡಿಸುವ ನೆಪದಲ್ಲಿ ನಿರುದ್ಯೋಗಿಗಳನ್ನು ವಂಚಿಸಿ, ಲಕ್ಷಾಂತರ ರು ಗಳಿಸುತ್ತಿದ್ದ ಜಾಲ ಪತ್ತೆಯಾಗಿದೆ. ಈ ಸಂಬಂಧ ಮಹಿಳೆ ಸೇರಿದಂತೆ ನಾಲ್ವರನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬಿಹಾರ ಮೂಲದ ರಾಜೀವ್ ಅಲಿಯಾಸ್ ರಾಜೀವ್ ರಂಜನ್ (30), ಆಂಧ್ರ ಪ್ರದೇಶ ಮೂಲದ ಮುಹಮ್ಮದ್ ಅಝರ್ (25) ತಮಿಳುನಾಡು ಮೂಲದ ಸತ್ಯಪ್ರಿಯಾ (25) ಹಾಗೂ ಕೇರಳ ಮೂಲದ ಎನ್.ನಾರಾಯಣ (29) ಎಂದು ಗುರುತಿಸಲಾಗಿದೆ.

ಆರೋಪಿಗಳು ಒಟ್ಟು 37 ನಿರುದ್ಯೋಗಿಗಳಿಗೆ ವಿಪ್ರೋ ಕಂಪೆನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ನಕಲಿ ಕರೆಪತ್ರ ನೀಡಿ ವಂಚಿಸಿದ್ದರು.ಈ ಸಂಬಂಧ ದೂರು ದಾಖಲಾದ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಇಮೇಲ್ ಬಂದರೆ ಎಚ್ಚರ: ಬಂಧಿತ ಆರೋಪಿ ಸತ್ಯಪ್ರಿಯಾ ತಮಿಳುನಾಡಿನ ಕೊಯಮತ್ತೂರಿನಲ್ಲಿ ಉದ್ಯೋಗ ಕೊಡಿಸುವ ಕನ್ಸ್‌ಲ್‌ಟೆನ್ಸಿ ಆರಂಭಿಸಿದ್ದು, ಇ-ಮೇಲ್ ಮೂಲಕ ನಿರುದ್ಯೋಗಿಗಳನ್ನು ಸಂಪರ್ಕಿಸಿ ಅವರ ದಾಖಲೆ ಮತ್ತು ಹಣ ನೀಡಿದರೆ ವಿಪ್ರೋದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ನಂಬಿಸುತ್ತಿದ್ದಳು. ಈ ದಾಖಲೆಗಳನ್ನು ಮತ್ತೊಬ್ಬ ಆರೋಪಿ ರಾಜೀವ್‌ಗೆ ನೀಡಿ ಹಣ ಪಡೆದು ವಂಚಿಸುತ್ತಿದ್ದರು.

ನಕಲಿ ಸಂದರ್ಶನ: ಬಂಧಿತ ರಾಜೀವ್ ವಿಪ್ರೋ ಕಂಪೆನಿಯ ನಕಲಿ ಗುರುತಿನಚೀಟಿ ಹೊಂದಿದ್ದು, ಕಂಪೆನಿಗೆ ನಿರುದ್ಯೋಗಿಗಳನ್ನು ಕರೆಸಿಕೊಂಡು ತಾನೆ ಎಂಡಿ ಎಂದು ಸುಳ್ಳು ಹೇಳಿಕೊಂಡು ಸಂದರ್ಶನ ನಡೆಸಿದ್ದಾನೆ. ಈತನ ವಿರುದ್ಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಕಾಲೇಜುಗಳಲ್ಲಿ ಸೀಟು ಕೊಡಿಸುವ ನೆಪದಲ್ಲಿ ನಕಲಿ ಸಂದರ್ಶನ ನಡೆಸಿ ವಂಚಿಸಿದ್ದಾನೆ. ಕುಮಾರಸ್ವಾಮಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬಂಧಿತ ಆರೋಪಿಗಳಿಂದ 44.43 ಲಕ್ಷ ರೂ.ನಗದು, ಎರಡು ಕಾರುಗಳು, ಎರಡು ದ್ವಿಚಕ್ರ ವಾಹನಗಳು, 3.20 ಲಕ್ಷ ರೂ.ಚಿನ್ನದ ಆಭರಣಗಳು, ಆರು ಮೊಬೈಲ್ ಫೋನ್‌ಗಳು ಸೇರಿದಂತೆ ಒಟ್ಟು 58.43 ಲಕ್ಷ ರೂ.ಮೊತ್ತದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+