ವಿದ್ಯಾರ್ಥಿಯನ್ನು ಅಪಹರಿಸಿ ಮತಾಂತರಕ್ಕೆ ಯತ್ನ

ಕಾರ್ತಿಕ್ ಕಳೆದ ವರ್ಷ ಮನೆಬಿಟ್ಟು ಕೆಲಸ ಹುಡುಕುತ್ತ ಮಂಗಳೂರಿಗೆ ಹೋಗಿದ್ದ. ಆ ಸಮಯದಲ್ಲಿ ಪರಿಚಯವಾದ ಲ್ಯಾನ್ಸಿ ಈತನನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸಿದ್ದ ಎಂದು ಆಪಾದಿಸಲಾಗಿದೆ. ನಂತರ ಮಂಗಳೂರು ಬಿಟ್ಟು ಕಾರ್ತಿಕ್ ಮನೆಗೆ ಹಿಂತುರುಗಿದ್ದ.
ಆದರೆ ಕಾಂಚನ ಶಾಲೆಗೆ ಇತ್ತೀಚೆಗೆ ಹಲವು ಬಾರಿ ಲ್ಯಾನ್ಸಿ ಬಂದು ಕಾರ್ತಿಕ್ ನನ್ನು ಮತಾಂತರ ಮಾಡಲು ಯತ್ನಿಸುತ್ತಿದ್ದ. ಕಾರ್ತಿಕ್ ಗೆ ಲ್ಯಾನ್ಸಿ 50 ರು. ಮತ್ತು ಮೊಬೈಲ್ ನಂಬರ್ ನೀಡಿ ಸಂಪರ್ಕಿಸುವಂತೆ ತಿಳಿಸಿದ್ದ ಎನ್ನಲಾಗಿದೆ.
ಈತನ ಕುರಿತು ಊರವರು ಕಾರ್ತಿಕ್ ಬಳಿ ವಿಚಾರಿಸಿದಾಗ ಮತಾಂತರದ ವಿಷಯ ಬೆಳಕಿಗೆ ಬಂದಿದೆ ಎಂದು ಮೂಲಗಳು ಹೇಳಿವೆ.. ನಂತರ ಕಾರ್ತಿಕ್ ನ ತಂದೆ ಜಗದೀಶ್ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಲ್ಯಾನ್ಸಿಯನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications