ರಿಸೆಪ್ಷನ್ ಕಾರ್ಡ್ ಪ್ರಮಾದ, ವಿಜೇಂದರ್ ಮೇಲೆ FIR

ದೆಹಲಿ ಮೂಲದ ಅಭಿಷೇಕ್ ಕದ್ಯಾನ್ ಎಂಬ ವ್ಯಕ್ತಿ ವಿಜೇಂದರ್ ಅವರ ರಿಸೆಪ್ಷನ್ ಕಾರ್ಡ್ ನಲ್ಲಿ ಆಗಿರುವ ಪ್ರಮಾದವನ್ನು ಗಮನಿಸಿ ಎಸ್ ಪಿ ಅಶ್ವಿನ್ ಸೈನ್ವಿ ಅವರಿಗೆ ತಿಳಿಸಿದ್ದಾರೆ. ಅದರೆ, ಸುಮಾರು ಒಂದು ತಿಂಗಳುಗಳ ಕಾಲ ಕೇಸ್ ಬುಕ್ ಮಾಡದೆ ಉದಾಸೀನ ತೋರಿದ ಪೊಲೀಸರು ಕೊನೆಗೂ ಕೋರ್ಟ್ ಗೆ ವಿಷಯ ತಿಳಿಸಿ ವಿಜೇಂದರ್ ಮೇಲೆ FIR ದಾಖಲಿಸಿದ್ದಾರೆ.
ವಿಜೇಂದರ್ ತನ್ನ ಬಾಲ್ಯದ ಗೆಳತಿ ಅರ್ಚನಾರನ್ನು ಮೇ 17, 2011ರಂದು ಮದುವೆಯಾದರು. ಈ ಆರೋಪದಲ್ಲಿ ತಪ್ಪಿತಸ್ಥರು ಎಂದು ಸಾಬೀತಾದರೆ ವಿಜೇಂದರ್ ಕುಟುಂಬ ಹಾಗೂ ಕಾರ್ಡ್ ಪ್ರಿಂಟರ್ ಕೂಡಾ 3 ತಿಂಗಳು ಸೆರೆವಾಸ ಅಥವಾ 5 ಸಾವಿರ ರೂ ದಂಡ ತೆರಬೇಕಾಗುತ್ತದೆ.
ರಾಷ್ಟ್ರೀಯ ಲಾಂಛನ ಹಾಗೂ ಕಾಯಿದೆ ದುರ್ಬಳಕೆ ತಡೆ ಕಾಯಿದೆಯ ಸೆಕ್ಷನ್ 3ರ ಪ್ರಕಾರ ಕೇಸ್ ಹಾಕಲಾಗಿದೆ. ಇದರ ಪ್ರಕಾರ ರಾಷ್ಟ್ರ ಚಿಹ್ನೆ, ಬಾವುಟ, ಗೀತೆ ಮುಂತಾದವುಗಳನ್ನು ವ್ಯಾಪಾರ ಹಾಗೂ ವೈಯಕ್ತಿಕ ಉದ್ದೇಶಕ್ಕೆ ಬಳಸುವಂತಿಲ್ಲ ಎಂದು ಭಿವಾನಿ ಸರ್ದಾರ್ ಪೊಲೀಸ್ ಠಾಣಾಧಿಕಾರಿ ಹೇಳಿದ್ದಾರೆ.












Click it and Unblock the Notifications