• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈಶ್ವರಪ್ಪ ಆಣೆ ಮಾಡಲಿ: ದೊಡ್ಡ ಗೌಡರ ಹೊಸ ಛಾಲೆಂಜ್

By Srinath
|

ಬೆಂಗಳೂರು, ಜೂ 30: ಆಣೆ ಪ್ರಮಾಣಗಳ ರಾಜ್ಯಭಾರ ಇನ್ನೂ ಮುಗಿದಿಲ್ಲ. ಈ ಬಾರಿ ಆಣೆಗೆ ಆಹ್ವಾನ ನೀಡಿರುವವರು ಎಚ್‌.ಡಿ. ದೇವೇಗೌಡ. ಆದರೆ ಎದುರಾಳು ಕೆ.ಎಸ್‌. ಈಶ್ವರಪ್ಪ ಇದನ್ನು ಸ್ವೀಕರಿಸಿದ್ದಾರೊ, ಇಲ್ಲವೋ ಇನ್ನೂ ತಿಳಿದುಬಂದಿಲ್ಲ. ದೇವರು ಯಾರು? ದೇವಸ್ಥಾನ ಯಾವುದು? ಮತ್ತೆ ಧರ್ಮಸ್ಥಳವೋ ? ಈಶ್ವರಪ್ಪನವರು ತಿಳಿಸುವಂತಾಗಬೇಕು.

ಆದರೆ ಒಂದು ಸಲಹೆ: ಶೃಂಗೇರಿ ಸ್ವಾಮೀಜಿಗಳ ಬಗ್ಗೆ ಮಾತ್ರವೇ ತನಗೆ ನಂಬಿಕೆ ಇರುವುದಾಗಿ ಇತ್ತೀಚೆಗೆ ದೊಡ್ಡ ಗೌಡರು ಘೋಷಿಸಿಕೊಂಡಿದ್ದಾರೆ. ಆದ್ದರಿಂದ ಶೃಂಗೇರಿಯಲ್ಲಿ ಮುಂದಿನ ಆಣೆ ಪ್ರಮಾಣ ಪ್ರಹಸನವನ್ನು ರಾಝ್ಯದ ಜನತೆ ನೋಡುವಂತಾಗಲಿ.

ವಿಷಯ ಏನೆಂದರೆ ಮೂರು ತಿಂಗಳ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್‌. ಈಶ್ವರಪ್ಪ ಅವರು ಬಿ.ಎಸ್‌. ಯಡಿಯೂರಪ್ಪ ಅವರನ್ನು ಮುಗಿಸುವವರೆಗೂ ನಿದ್ದೆ ಮಾಡುವುದಿಲ್ಲ ಎಂದು ದೊಡ್ಡ ಗೌಡರ ಬಳಿ ಹೇಳಿದ್ದರಂತೆ.

ಈಗ ಯಡಿಯೂರಪ್ಪ ಕಡೆಯಿಂದ ವಸೂಲಿ ಚೆನ್ನಾಗಿದೆ ಎಂದು ಈಶ್ವರಪ್ಪ ಅವರ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿರುವ ಗೌಡರು, ಬೇಕಿದ್ದರೆ ಈ ನನ್ನ ಮಾತು ಸುಳ್ಳು ಎಂದು ಈಶ್ವರಪ್ಪ ಆಣೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಇಂಚಿಂಚೂ ಜಾಗವನ್ನು ಈಶ್ವರಪ್ಪ ಹಾಗೂ ಯಡಿಯೂರಪ್ಪ ಕಬಳಿಸುತ್ತಿದ್ದಾರೆ. ಇವರು ಉಳಿಸಿದ ಜಾಗವನ್ನು ಮತ್ತೂಬ್ಬ ನಾಯಕ ಡಿ.ಎಚ್‌. ಶಂಕರಮೂರ್ತಿ ಖರೀದಿಸುತ್ತಿದ್ದಾರೆ. ಇಂಧನ ಸಚಿವರಾದ ಶೋಭಾ ಕರಂದ್ಲಾಜೆ ಹಾಗೂ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಅವರ ಈಗಿನ ಆಸ್ತಿ ಹಾಗೂ ಅಧಿಕಾರಕ್ಕೆ ಬರುವ ಮೊದಲಿನ ಆಸ್ತಿ ಬಗ್ಗೆಯೂ ತನಿಖೆ ನಡೆಯಲಿ ಎಂದು ಹೇಳಿದರು.

ಬಿಜೆಪಿ ಪ್ರಕಟಿಸಿರುವ ಚಾರ್ಜ್‌ಶೀಟ್‌ನಲ್ಲಿ ಯಾರದೋ ಮನೆಯನ್ನು ನನ್ನ ಮನೆಯೆಂದು ಪ್ರಕಟಿಸಲಾಗಿದೆ. ಇಡೀ ಪುಸ್ತಕದಲ್ಲಿ ಸುಳ್ಳುಗಳ ಕಂತೆಯನ್ನು ಪೋಣಿಸಲಾಗಿದೆ. ಹಿಂದೆ ದೇವೇಗೌಡರ ವಿರುದ್ಧ ಬಿಜೆಪಿ ನಾಯಕರಾಗಿದ್ದ ವೆಂಕಟಗಿರಿ ಗೌಡರು ಪುಸ್ತಕ ಬರೆದಿದ್ದರು. ಈಗ ಈ ಯಡಿಯೂರಪ್ಪ ಹಾಗೂ ಈಶ್ವರಪ್ಪ ಸುಳ್ಳು ಆರೋಪಗಳ ಸರಮಾಲೆಯನ್ನೇ ಹೇಳುತ್ತಿದ್ದಾರೆ ಎಂದರು.

English summary
Truth-test: 3 months back BJP state president KS Eshwarappa has reportedly told to gowda that 'untill an end comes to BSY there will be no peace for him (KSE )'. As such HD Deve Gowda invites KS Eshvarappa to take oath regarding this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more