ವಿದ್ಯಾರ್ಥಿನಿ ಮೇಲೆ ಸರಣಿ ಮಾನಭಂಗಗೈದ ಆಪ್ತಮಿತ್ರರು

Minor Student rape Bajpe
ಮಂಗಳೂರು ಜೂ 30: ಕಾಮಪಿಪಾಸು ಆಟೋಚಾಲಕನಿಗೆ ಮುಂಜಾನೆ ಹೊತ್ತು ಉಕ್ಕಿ ಬಂದ ಕಾಮದಾಸೆ ಹತ್ತಿಕ್ಕಿಕೊಳ್ಳಲಾಗದೆ ಎದುರಿಗೆ ಕಂಡ ಅಪ್ರಾಪ್ತೆಯನ್ನು ಎಳೆದೊಯ್ದು ಅತ್ಯಾಚಾರ ಮಾಡಿದ್ದಾನೆ. ಸಾಲದೆಂಬಂತೆ ತನ್ನ ಗೆಳೆಯನನ್ನು ಕರೆಸಿಕೊಂಡು ಸಾಮೂಹಿಕವಾಗಿ ಹುಡುಗಿಯ ಬಾಳು ಹಾಳುಗೆಡವಿದ್ದಾರೆ. ಇನ್ನೂ ಏಳನೇ ತರಗತಿ ಓದುತ್ತಿರುವ ಹುಡುಗಿಗೆ ಈ ಘಟನೆಯಿಂದ ಶಾಕ್ ಗೆ ಒಳಗಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಮುಚ್ಚೂರು-ನೀರುಡೆ ಎಂಬಲ್ಲಿನ ನಿವಾಸಿ ಬಾಲಕಿ ರೋಹಿಣಿ(ಹೆಸರು ಬದಲಿಸಲಾಗಿದೆ) ಬಜ್ಪೆ ಸಮೀಪದ ಕಜೆಪದವು ಶಾಲೆಯಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದಾಳೆ. ಮುಂಜಾನೆ ಎಂದಿನಂತೆ ಶಾಲೆಗೆ ಹೊರಟ್ಟಿದ್ದ ರೋಹಿಣಿಯ ಮೇಲೆ ಕಾಮುಕ ರಿಕ್ಷಾ ಚಾಲಕ ಮನೋಜನ ಕಣ್ಣು ಬಿದ್ದಿದೆ. ರೋಹಿಣಿಯನ್ನು ಬಲವಂತವಾಗಿ ಆಟೋದಲ್ಲಿ ಎತ್ತಿಹಾಕಿಕೊಂಡು ತನ್ನ ಮನೆಗೆ ಕರೆದೊಯ್ದಿದ್ದಾನೆ. ತನ್ನ ಆಪ್ತ ಸ್ನೇಹಿತನನ್ನು ಕರೆಸಿಕೊಂಡು ಅತ್ಯಾಚಾರ ನಡೆಸಿದ್ದಾನೆ. ಸಂಜೆವರೆಗೂ ಕಾಮದಾಸೆಯನ್ನು ತೀರಿಸಿಕೊಂಡ ಈ ಇಬ್ಬರು ಸಂಜೆ ಹುಡುಗಿಯನ್ನು ಸುಂಕದ ಕಟ್ಟೆ ಬಳಿ ಬಿಟ್ಟು ಯಾರಿಗೂ ಹೇಳಬೇಡ ಎಂದು ಬೆದರಿಸಿದ್ದಾರೆ.

ಕಳೆದ ವಾರಾಂತ್ಯ ನಡೆದ ಘಟನೆಯ ಪರಿಣಾಮದಿಂದ ಶಾಕ್ ಗೆ ಒಳಗಾಗಿದ್ದ ರೋಹಿಣಿ, ಮನೆಯವರು ಒತ್ತಾಯಿಸಿದ ನಂತರ ಸರಣಿ ಅತ್ಯಾಚಾರ ನಡೆದ ಕಥೆಯನ್ನು ಹೇಳಿ ಕಣ್ಣೀರಿಟ್ಟಿದ್ದಾಳೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ಜರ್ಜರಿತಳಾಗಿದ್ದ ರೋಹಿಣಿಗೆ ಲೇಡಿಗೋಷನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಜ್ಪೆ ಪೊಲೀಸರು ಆರೋಪಿಗಳ ಹುಡುಕಾಟದಲ್ಲಿದ್ದಾರೆ. ಪತಿಯಿಂದ ದೂರವಿರುವ ಹೆಂಗಸನ್ನು ತನ್ನ ಮನೆಯಲ್ಲಿ ತಂದಿಟ್ಟುಕೊಂಡಿದ್ದ ಮನೋಜ್ ನ ಈ ಕಚಡ ಕೃತ್ಯಕ್ಕೆ ಆಕೆ ಕೂಡಾ ಸಹಭಾಗಿ ಎಂಬ ಆರೋಪವಿದೆ.

ಮತ್ತೊಂದು ಪ್ರಕರಣ: ಸತ್ಯಮಂಗಲದಿಂದ ಉಡುಪಿಗೆ ಬರುತ್ತಿದ್ದ ತಮಿಳುನಾಡಿನ ಸರ್ಕಾರಿ ಬಸ್ ಚಾಲಕರು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ. TN 38 N 2342 ಎಂಬ ಸಂಖ್ಯೆಯ ಬಸ್ ಚಾಲಕರಾದ ಅಶೋಕ್ ಕುಮಾರ್ ಹಾಗೂ ರಾಮಣ್ಣ ಅವರನ್ನು ಮಾನ್ವಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+