ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾರ್ಜ್ ಶೀಟ್ ವಿರುದ್ಧ ಕುಮಾರಸ್ವಾಮಿ ಉಪವಾಸ ಸತ್ಯಾಗ್ರಹ

By Mahesh
|
Google Oneindia Kannada News

Kumaraswamy Hunger Strike
ಬೆಂಗಳೂರು ಜೂ 30: ದೇವೇಗೌಡರ ಕುಟುಂಬ ವಿರುದ್ಧ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ಹಿರಿಯ ಮುಖಂಡರು ಜೂ.28ರಂದು ಬಿಡುಗಡೆ ಮಾಡಿದ 55 ಪುಟಗಳ ಚಾರ್ಜ್‌ಶೀಟ್ ವಿರುದ್ಧ ಎಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಅಕ್ರಮ ಆಸ್ತಿಗೆ ಸಂಬಂಧಿಸಿಂತೆ ಇನ್ನೊಂದು ವಾರದೊಳಗೆ ತನಿಖೆಗೆ ಆದೇಶಿಸಿ. ಮೂರು ತಿಂಗಳೊಳಗೆ ತನಿಖಾ ವರದಿ ಒಪ್ಪಿಸಿ ಸತ್ಯಾಸತ್ಯತೆ ಇತ್ಯರ್ಥ ಮಾಡದಿದ್ದರೆ, ವಿಧಾನಸೌಧದ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ ಹೂಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸರ್ಕಾರಕ್ಕೆ ಗಡುವು ನೀಡಿದ್ದಾರೆ.

ಜೆಡಿಎಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಆಣೆ ಪ್ರಮಾಣ ಮಾಡದೆ ಯಡಿಯೂರಪ್ಪ ಪಲಾಯನ ಮಾಡಿದ್ದಾರೆ. ರಾಮನ ಹೆಸರು ಹೇಳಿಕೊಂಡು ಆರು ವರ್ಷ ಅಧಿಕಾರ ಮಾಡಿದ್ದು ಪಾಪ ಗಡ್ಕರಿ ಮರೆತಿದ್ದಾರೆ. ಈಗ ರಾಮನನ್ನು ಕಾಡಿಗೆ ಅಟ್ಟಿದ್ದಾರೆ. ಧರ್ಮದಲ್ಲಿ ರಾಜಕಾರಣ ಇರಬಾರದು ಎಂದು ಈಗ ಉಪದೇಶ ಮಾಡುತ್ತಾರೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.

ನಾನು ಈಗಾಗಲೇ ಹಲವು ಬಾರಿ ಮುಖ್ಯಮಂತ್ರಿ ವಿರುದ್ಧ ಹಲವು ಆರೋಪ ಮಾಡಿ, ದಾಖಲೆ ಬಿಡುಗಡೆ ಮಾಡಿರುವೆ. ಆದರೆ ಮುಖ್ಯಮಂತ್ರಿಗಳಿಂದ ಸ್ಪಷ್ಟನೆ ಸಿಕ್ಕಿಲ್ಲ. ಬಿಜೆಪಿ ಬಿಡುಗಡೆ ಮಾಡಿರುವ ಚಾರ್ಜ್‌ಶೀಟ್‌ನ ಆರೋಪದಲ್ಲಿ ಯಾವುದೇ ಹುರುಳಿಲ್ಲ. ನಮ್ಮ ಕುಟುಂಬದ ವಿರುದ್ದ ಮಾಡಿರುವ 1500 ಕೋಟಿ ರು.ಗಳ ಆರೋಪದ ಬಗ್ಗೆ ಸಮಗ್ರ ತನಿಖೆ ಆಗಲಿ, ಸತ್ಯಾಸತ್ಯತೆ ಹೊರಬರಲಿ. ಇಲ್ಲದೆ ಹೋದಲ್ಲಿ ಮುಂದೆ ಆಗುವ ಅನಾಹುತಕ್ಕೆ ಸರ್ಕಾರವೇ ಹೊಣೆ ಎಂದು ಕುಮಾರಸ್ವಾಮಿ ಗುಡುಗಿದರು.

ಯಡಿಯೂರಪ್ಪ ಧೈರ್ಯವಾಗಿ ಮುಂದೆ ಬಂದು ಸಮರ ಮಾಡದೆ, ಕೆಲವು ಸರ್ಕಾರಿ ವಿದೂಷಕರನ್ನು ಬಳಸಿ ತಪ್ಪು ಮಾಹಿತಿಯುಳ್ಳ ಚಾರ್ಜ್ ಶೀಟ್ ತಯಾರಿಸಲು ತುಂಬಾ ಶ್ರಮ ಪಟ್ಟಿದ್ದಾರೆ. ನಮ್ಮ ಕುಟುಂಬದ ಹೆಸರಿನಲ್ಲಿ ಇಲ್ಲದ ಆಸ್ತಿಪಾಸ್ತಿ ವಿವರಗಳನ್ನು ಸೇರಿಸಿದ್ದಾರೆ. ಬಿಜೆಪಿ ನಾಯಕರಿಗೆ ನೈತಿಕತೆ, ಧೈರ್ಯ, ತಾಕತ್ತಿದ್ದರೆ, ಪ್ರಾಮಾಣಿಕತೆ ಇದ್ದರೆ ತನಿಖೆ ನಡೆಸಲಿ ಎಂದು ಕುಮಾರಸ್ವಾಮಿ ಸವಾಲೆಸೆದಿದ್ದಾರೆ.

English summary
An angry JD-S leader HD Kumaraswamy today (Jun 30) said he would undertake a fast-to-death from Friday if the BJP government failed to order an enquiry into the "chargesheet" against his family released by the ruling party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X