ಹೆಂಡದ ಸಾಲ ತೀರಿಸಲು ಹೆಂಡತಿಯನ್ನೇ ಮಾರಿದ ಗಂಡ

ಘಟನೆ ವಿವರ: ಕಾಸರಗೋಡಿನ ನೀಲೆಶ್ವರ ತಾಲೂಕಿನ ಕರಿಂತಲಂ ನಿವಾಸಿ ಪ್ರಸಾದ್ ಬಂಧಿತ. ಆತ ಕೆಲವು ವರ್ಷಗಳ ಹಿಂದೆ ಯುವತಿಯೊಬ್ಬಳನ್ನು ಮದುವೆಯಾಗಿದ್ದ. ಮದುವೆಯಾದಗಿನಿಂದ ಅವಳಿಗೆ ಚಿತ್ರಹಿಂಸೆ ನೀಡುತ್ತಿದ್ದ. ಕುಡಿತ, ಜೂಜಾಟದ ಚಟಗಳನ್ನು ಅಂಟಿಸಿಕೊಂಡಿದ್ದ ಈತ ತನ್ನ ಸ್ನೇಹಿತ ಮನೋಜ್ ಎಂಬಾತನಿಂದ ಹದಿನೈದು ಸಾವಿರ ರು. ಸಾಲ ಪಡೆದಿದ್ದ.
ಪ್ರಸಾದ್ ಮನೆಗೆ ಬಂದು ಮನೋಜ್ ಎಂಬಾತ ಜೂಜಾಟವಾಡುತ್ತಿದ್ದ. ಮನೋಜನಿಂದ ಪ್ರಸಾದ್ ಹದಿನೈದು ಸಾವಿರ ರು. ಸಾಲ ಪಡೆದಿದ್ದ. ಕೊನೆಗೆ ಸಾಲ ತೀರಿಸಲಾಗದೇ ತನ್ನ ಹೆಂಡತಿಯನ್ನೇ ಮಾರಿಬಿಟ್ಟ. ನಂತರ ಮನೆಗೆ ಮನೋಜ್ ಪದೇ ಪದೇ ಬರುತ್ತಿದ್ದ. ಈತನ ಕಿರುಕುಳ ತಾಳಲಾರದೇ ಆಕೆ ನ್ಯಾಯಾಲಯದಲ್ಲಿ ದೂರು ದಾಖಲಿಸಿದಳು. ಮನೋಜ್ ಅತ್ಯಾಚಾರ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾಳೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಪ್ರಸಾದನನ್ನು ಬಂಧಿಸಿದ್ದಾರೆ. ಮನೋಜ್ ತಪ್ಪಿಸಿಕೊಂಡಿದ್ದಾನೆ. ಆತನನ್ನು ಹುಡುಕುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಬಿಹಾರದಲ್ಲೂ ಇಂತಹ ಒಂದು ಘಟನೆ ನಡೆದಿತ್ತು. ಅಲ್ಲಿನ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು 40 ಸಾವಿರ ರು.ಗೆ ಮಾರಾಟ ಮಾಡಿ ಪೊಲೀಸರ ಅತಿಥಿಯಾಗಿದ್ದ.












Click it and Unblock the Notifications