ಬಾತುಕೋಳಿ ಕುರಿತು ಮಗಳು ಕೇಳಿದ ಪ್ರಶ್ನೆಗಳು

Ducks
ಲಾಲ್ ಬಾಗ್ ನಲ್ಲಿ ಸುತ್ತಾಡುತ್ತಿರುವಾಗ ಮಗಳು "ಡ್ಯಾಡಿ ಡ್ಯಾಡಿ ಡಕ್ ಡಕ್" ಅಂದಳು. ಅವಳು ಆ ಕೆರೆಯಲ್ಲಿ ಗುಂಪಾಗಿರುವ ಬಾತುಕೋಳಿಗಳನ್ನು ನೋಡುತ್ತ ನಿಂತಳು. ಮಗಳಿಂದ ಯಾವ ಪ್ರಶ್ನೆ ಬರಬಹುದೋ ಅಂದುಕೊಂಡು ನಾನು ಮಾನಸಿಕವಾಗಿ ಸಿದ್ಧನಾದೆ. ತಕ್ಷಣ ಮಗಳು ಕೇಳಿದಳು "ಪಪ್ಪ ಇವು ಹುರಿಯಕ್ಕಿ ತಿಂತಾವ?" ಅವಳ ಪ್ರಶ್ನೆ ಕೇಳಿದಾಗ ಪರೀಕ್ಷೆಯಲ್ಲಿ ಸುಲಭದ ಪ್ರಶ್ನೆ ನೋಡಿ ಖುಷಿಗೊಳ್ಳುವ ವಿದ್ಯಾರ್ಥಿಯಂತೆ ನನ್ನ ಮುಖ ಅರಳಿತು.

"ಹುಂ ಅವಕ್ಕೂ ಹಸಿವಾಗುತ್ತೆ. ನೀನು ಇಲ್ಲಿಂದ ಹುರಿಯಕ್ಕಿ, ಕಡಲೆಕಾಯಿ, ಜೋಳದ ಕಾಳುಗಳನ್ನು ಹಾಕಿದ್ರೆ ತಿಂತಾವೆ" ಅಂದೆ. ನನ್ನ ಪ್ರಶ್ನೆಯಿಂದ ಮಗಳಿಗೆ ಸಮಾಧಾನವಾಗಿಲ್ಲ ಎಂದು ಅವಳ ಮುಖ ನೋಡಿದಾಗಲೇ ಅರಿವಾಗತೊಡಗಿತು. ನಾನು ನನ್ನ ಸಂಪೂರ್ಣ ಜ್ಞಾನಧಾರೆಯನ್ನು ಮಗಳಿಗೆ ಎರೆಯಲು ಸಿದ್ಧನಾದೆ.

"ಹೆಚ್ಚಾಗಿ ಇವು ಹುಲ್ಲು, ಹುಳ, ಚಿಕ್ಕ ಚಿಕ್ಕ ಮೀನು, ಹುಳುಹುಪ್ಪಟೆಗಳನ್ನು ತಿನ್ನುತ್ತೆ. ಹೆಚ್ಚಾಗಿ ಮೃದುವಾಗಿರೋ ಆಹಾರ ಇವಕ್ಕೆ ಇಷ್ಟ. ಕೆಲವು ಬಾತುಕೋಳಿಗಳು ದೊಡ್ಡ ದೊಡ್ಡ ಮೀನುಗಳನ್ನು ಹಿಡಿಯುತ್ತವೆ" ಅನ್ನುತ್ತ ಲಾಲ್ ಬಾಗ್ ಕೆರೆಯ ದಂಡೆಯ ಮೇಲೆ ದಂಡೆಯಾಗಿ ಬೆಳೆದಿರುವ ಬಿದಿರಿನ ಮರಗಳ ಕೆಳಗೆ ಇರುವ ಬೆಂಚ್ ಮೇಲೆ ಕುಳಿತುಕೊಂಡೆವು.

ಅವಳಿಗೆ ಬಾತುಕೋಳಿ ಕುರಿತು ಇನ್ನೂ ಕುತೂಹಲ ತಣಿದ ಹಾಗೆ ಕಾಣಲಿಲ್ಲ. "ನೋಡು ಮಗು ಅಲ್ಲಿ ಡಕ್ ಡಕ್ ಅನ್ನೋದೆಲ್ಲ ಹೆಣ್ಣು ಬಾತುಕೋಳಿಗಳು. ಹೆಚ್ಚಾಗಿ ಗಂಡು ಬಾತುಕೋಳಿಗಳು ಹಾಗೇ ಸದ್ದು ಮಾಡೋದಿಲ್ಲ. "ಡಕ್ ಪದ ಡಿವರ್ ಪದದಿಂದ ಬಂದಿದೆ. ಡಿವರ್ ಅಂದ್ರೆ ಸುಮ್ಮನೆ ಸುತ್ತಾಟ ಅರ್ಥ. ನೋಡು ಆ ಬಾತುಕೋಳಿಗಳು ಏನು ಕೆಲಸವಿಲ್ಲದೇ ಆ ಕಡೆ ಈ ಕಡೆ ಸುತ್ತುತ್ತಿವೆ" ನಾನು ಹೇಳುತ್ತ ಹೋದೆ.

ತಕ್ಷಣ ಮಗಳು "ಓಹ್. ನಂಗೆ ಇನ್ನು ನನ್ನ ಫ್ರೆಂಡನ್ನು ಡಿವರ್ ಅಂತ ಕರೀತಿನಿ. ಅವಳು ಜಾಸ್ತಿ ಸುತ್ತಾಡ್ತಾಳೆ." "ಹಾಗೆಲ್ಲ ಅಡ್ಡ ಹೆಸರು ಕರೀಬಾರದು ಮಗು" ಎಂದು ಹೇಳಿ ಬಾತುಕೋಳಿ ಬಗ್ಗೆ ಹೇಳುತ್ತ ಹೋದೆ. "ನೋಡು ಆ ಬಾತುಗಳ ಕೊಕ್ಕು ಚಿಕ್ಕದು. ಕೆಲವು ಕಡೆ ದೊಡ್ಡ ಕೊಕ್ಕಿನ ಬಾತುಕೋಳಿಗಳು ಸಿಗ್ತಾವೆ. ನದಿಗಳಲ್ಲಿರುವ ಬಾತುಕೋಳಿಗಳನ್ನು ಮೊಸಳೆ ತಿನ್ತಾವೆ. ಮನುಷ್ಯರೂ ಕೂಡ ಬಾತುಕೋಳಿ ತಿನ್ತಾರೆ."

ಇನ್ನು ಏನಪ್ಪ ಬಾತುಕೋಳಿ ಕುರಿತು ಹೇಳೋದು ಅಂತ ಯೋಚಿಸಿದೆ. ಬಾತುಕೋಳಿ ಕುರಿತು ನನ್ನ ಭಾಷಣ ಮಗಳಿಗೂ ಬೋರ್ ಹೊಡೆಸಿದ ಹಾಗಿತ್ತು. ಸರಿ ಹೋಗೋಣ ಅಂದಾಳು. ನಾವು ಮುಂದೆ ನಡೆದೆವು.

ನಡೀತಾ ನಡೀತಾ ಈ ಬಾತುಕೋಳಿಗಳ ಬಗ್ಗೆ ಯಾಕೋ ಅಯ್ಯೋ ಪಾಪ ಅನಿಸಿತು. ಲಾಲ್ ಬಾಗ್ ಕೆರೆಯಲ್ಲಿ ತಾವೇ ಸಾಕಿ ಬೆಳೆಸಿದ ಬಾತುಕೋಳಿಗಳನ್ನು ಅವನ್ನು ಬೆಳೆಸಿದವರೇ ಅವು ಕೊಬ್ಬಿದ ನಂತರ ತಾವೇ ಸ್ವಾಹಾ ಮಾಡುತ್ತಾರಂತೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+