ಲೈಂಗಿಕ ಕಿರುಕುಳ : ತಪ್ಪಿತಸ್ಥ ಪ್ರೊಫೆಸರ್ ಗೆ ವಿವಿ ಶ್ರೀರಕ್ಷೆ?
ಮೈಸೂರು
ಜೂ 28 : ಪಿಎಚ್‌ಡಿ ವಿದ್ಯಾರ್ಥಿನಿ ಸರಿತಾ ಮೇಲೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿಯಲ್ಲಿ ಪ್ರೊ ಶಿವಬಸವಯ್ಯ ತಪ್ಪಿತಸ್ಥ ಎಂದು ಸೂಚಿಸಲಾಗಿದೆ. ಆದರೆ, ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರು ಕಳಂಕಿತ ಪ್ರಾಧ್ಯಾಪಕರನ್ನು ರಕ್ಷಿಸುವ ತಂತ್ರ ಹೆಣೆಯುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. id="toptextpromo">ಕೆ
ಯಶೋಧರಾ ನೇತೃತ್ವದ ತಂಡ ಸಲ್ಲಿಸಿದ ವರದಿಯನ್ನು ಗಾಳಿಗೆ ತೂರಲಾಗಿದ್ದು, ಇಲಾಖಾ ವರದಿಗೆ ಕಾಯಲಾಗುತ್ತಿದೆ. ಕೊನೆ ಪ್ರಯತ್ನ ಎಂಬಂತೆ ರಾಜ್ಯಪಾಲರನ್ನು ಭೇಟಿ ಮಾಡಿ ನ್ಯಾಯಕ್ಕಾಗಿ ಮೊರೆ ಇಡುತ್ತೇವೆ. ಇಲ್ಲೂ ನ್ಯಾಯ ಸಿಗದಿದ್ದರೆ ರಾಜಭವನದ ಎದುರು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ಆ ಮೂಲಕವಾದರೂ ವಿವಿಯ ಇತರೆ ಹೆಣ್ಣು ಮಕ್ಕಳಿಗೆ ನ್ಯಾಯ ದೊರಕಲಿ ಎಂದು ನೊಂದ ವಿದ್ಯಾರ್ಥಿನಿ ಸರಿತಾ ದಂಪತಿ ಹತಾಶೆಯಿಂದ ಹೇಳುತ್ತಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಜೂ
24 ರಂದು ನಡೆದ ವಿವಿ ಸಿಂಡಿಕೇಟ್ ಸಭೆಯಲ್ಲಿ ಯಾವುದೇ ಚರ್ಚೆ ನಡೆಯಲಿಲ್ಲ. ಇಲಾಖಾ ವರದಿ ಬಂದ ಬಳಿಕ ಪ್ರಾಧ್ಯಾಪಕರ ಭವಿಷ್ಯ ನಿರ್ಧರಿಸಲಾಗುವುದು ಎಂದು ವಿವಿ ಮೂಲಗಳಿಂದ ತಿಳಿದುಬಂದಿದೆ.ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆ ನಡೆಸುತ್ತಿರುವ ಬಗ್ಗೆ ತಿಳಿದಿಲ್ಲ. ಈ ಬಗ್ಗೆ ನನ್ನನು ಯಾರು ಪ್ರಶ್ನಿಸಿಲ್ಲ. ಮಾಹಿತಿ ಇಲ್ಲದೆ ತನಿಖೆ ಏನು ನಡೆಸುತ್ತಿದೆ. ಇದೆಲ್ಲವು ಶಿವಬಸವಯ್ಯ ಅವರನ್ನು ಬಚಾವ್ ಮಾಡುವ ತಂತ್ರ ಎಂದು ಸರಿತಾ ಹೇಳಿದ್ದಾರೆ. [ಕೇಸ್ ಹಿಸ್ಟರಿ ಇಲ್ಲಿದೆ]











Click it and Unblock the Notifications