ಹತ್ಯೆಗೂ ಮುನ್ನ ಮುಂಬೈ ನಟಿಯ ಮೇಲೆ ಅತ್ಯಾಚಾರ

ಅಶ್ವಿನಿ ಮತ್ತು ಶಿವಾನಂದಂ ದಂಪತಿ ಎರಡೂವರೆ ವರ್ಷದ ಹಿಂದೆ ಇಲ್ಲಿ ಬಾಡಿಗೆ ಮನೆ ಹಿಡಿದಿದ್ದರು. ಶಿವಾನಂದಂನ ಕಸಿನ್ ಸುರೇಶ್ ಎಂಬ ಯುವಕ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದ್ದು, ಅವನು ಪರಾರಿಯಾಗಿದ್ದಾನೆ.
ಅಶ್ವಿನಿ ಪತಿ ಶಿವಾನಂದಂ ಹತ್ಯೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ಅಶ್ವಿನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಹತ್ಯೆ ಸಂದರ್ಭದಲ್ಲಿ ಅಶ್ವಿನಿ ಮೇಲೆ ಅತ್ಯಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ವೈದ್ಯರು ಪೊಲೀಸರಿಗೆ ಹೇಳಿದ್ದಾರೆ. ಶವ ಪರೀಕ್ಷೆ ವರದಿ ಇನ್ನೂ ಬಂದಿಲ್ಲ.
ಹತ್ಯೆ ಸಂದರ್ಭದಲ್ಲಿ ಶುಕ್ರವಾರ ಮಧ್ಯಾಹ್ನ 12.30ರಲ್ಲಿ ಅಶ್ವಿನಿ ಮನೆಯಿಂದ ಸುರೇಶ್ ಹೊರಬರುತ್ತಿರುವುದನ್ನು ನೆರೆಮನೆಯವರು ನೋಡಿದ್ದರು. ಸುರೇಶ್ ಮೊಬೈಲ್ ಈಗ ಸ್ವಿಚ್ ಆಫ್ ಆಗಿದೆ. ಈ ಮಧ್ಯೆ, ವಂದವಾಸಿ ಸಮೀಪವಿರುವ ಸುರೇಶನ ಹುಟ್ಟೂರಾದ ಪೊಣ್ಣೂರಿಗೆ ಪೊಲೀಸ್ ತಂಡ ತೆರಳಿದೆ.
ವೆಲ್ಲೂರಿನ ಶಿವಾನಂದಂ ಐದು ವರ್ಷದ ಹಿಂದೆ ಮುಂಬೈಗೆ ಉದ್ಯೋಗವನ್ನರಸಿ ಹೋಗಿದ್ದಾಗ ಅಶ್ವಿನಿ ಜತೆ ಪ್ರೇಮಾಂಕುರವಾಗಿತ್ತು. ಮದುವೆ ನಂತರ ಇಬ್ಬರೂ ಚೆನ್ನೈನಲ್ಲಿ ವಾಸವಾಗಿದ್ದರು. ಅಶ್ವಿನಿ ಚಿತ್ರಗಳಲ್ಲಿ ನಟಿಸುವುದು ಶಿವಾನಂದಂಗೆ ಇಷ್ಟವಿರಲಿಲ್ಲ. ಈ ಸಂಬಂಧ ಇಬ್ಬರ ಮಧ್ಯೆ ಅನೇಕ ಬಾರಿ ಜಗಳವೂ ನಡೆದಿತ್ತು.












Click it and Unblock the Notifications