ಥೇಮ್ಸ್ ನದಿ ನೀರ ಮೇಲೆ ಬರಿಗಾಲಲ್ಲಿ ಡೈನಮೋ ನಡಿಗೆ

ಡೈನಮೋ ಎಂದು ಕರೆದುಕೊಳ್ಳುವ 28 ವರ್ಷದ ಸ್ಟೀವ್ ಫ್ರಾಯ್ನೆ ಈ ಸಾಹಸ ಮಾಡಿದ್ದು ಮ್ಯಾಜಿಕ್ ಇಂಪಾಸಿಬಲ್ ಎಂಬ ಹೊಸ ಟಿ.ವಿ ಧಾರಾವಾಹಿಗಾಗಿ ಎಂದು ತಿಳಿದುಬಂದಿದೆ. ತನ್ನ ಜಾದೂ ಕಾರ್ಯಕ್ರಮಗಳಿಗೆ ಪ್ರಖ್ಯಾತರನ್ನೇ ಕರೆಸಿಕೊಳ್ಳುವುದು ವಾಡಿಕೆಯಾಗಿತ್ತು. ಈ ಬಾರಿ ಮಾತ್ರ ಡಿಫರೆಂಟ್. ರಭಸದಿಂದ ಹರಿಯುವ ನದಿಯ ಮಧ್ಯೆ ನಿಂತು ನಡೆದುಕೊಂಡು ಹೋಗುವವಂತೆ ಭ್ರಮೆ ಸೃಷ್ಟಿಸಿ ಯಶಸ್ವಿಯಾಗಿದ್ದಾನೆ.
ಬ್ರಾಡ್‌ಫೋರ್ಡ್‌ನಲ್ಲಿ ಹುಟ್ಟಿರುವ ಸ್ಟೀವ್ ನ ಮೋಡಿ ಮುಗಿಯುವ ತನಕ ವೆಸ್ಟ್ ಮಿನಿಸ್ಟರ್ ಸೇತುವೆ ಮೇಲೆ ನಿಂತು ಪೊಲೀಸರು ಚಪ್ಪಾಳೆ ತಟ್ಟುತ್ತಾ ನಿಂತಿದ್ದರು. ನಂತರ ಲಂಡನ್‌ನ ಹೌಸ್ ಆಫ್ ಪಾರ್ಲಿಮೆಂಟ್‌ನ ಎದುರು ಈ ಸಾಹಸ ನಡಿಗೆ ಪ್ರದರ್ಶಿಸಿದ ಸ್ಟೀವ್ ನನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಮೊಬೈಲ್ ಫೋನ್ ಅನ್ನು ಬೀರ್ ಬಾಟಲ್ ಮಾಡುವುದು, ಹಿಮದ ರಾಶಿಯನ್ನು ಡೈಮಂಡ್ ಆಗಿ ಬದಲಿಸುವುದು ಮುಂತಾದ ಟ್ರಿಕ್ಸ್ ಗಳನ್ನು ಪ್ರದರ್ಶಿಸಿ ಜನ ಮೆಚ್ಚುಗೆ ಗಳಿಸಿದ್ದಾನೆ.












Click it and Unblock the Notifications