ಕರಾವಳಿಯಲ್ಲಿ ಮಲೇರಿಯಾ ಡೆಂಗ್ಯೂ ಭೀತಿಯಲ್ಲಿ ಜನತೆ

Dengue fear
ಮಂಗಳೂರು, ಜೂನ್ 28: ಕಳೆದ ವರ್ಷ ಬೆಚ್ಚಿ ಬೀಳಿಸಿದ ಡೆಂಗ್ಯೂ ಜ್ವರ ಮತ್ತೆ ದಕ್ಷಿಣ ಕನ್ನಡ ಜಿಲ್ಲೆಗೆ ವಕ್ಕರಿಸಿಕೊಂಡಿದೆಯೇ? ಈ ತಿಂಗಳಲ್ಲಿ ಜಿಲ್ಲೆಯಲ್ಲಿ ಒಂದೆರಡು ಡೆಂಗ್ಯೂ ರೋಗ ಲಕ್ಷಣಗಳು ಪತ್ತೆಯಾಗಿವೆ. ಹಲವು ಮಂದಿಗೆ ಡೆಂಗ್ಯೂ ಹಬ್ಬಿರುವುದಾಗಿ ಸಂಶಯಿಸಲಾಗಿದೆ. ಇದರೊಂದಿಗೆ ಮಲೇರಿಯಾ ಕೂಡ ವ್ಯಾಪಕವಾಗಿ ಹಬ್ಬಿದೆ.

ಮೂಡಬಿದಿರೆಯ ಸೌಮ್ಯ ಶ್ರೀದರ್ ಮತ್ತು ಪುತ್ತೂರು ಶಿರಾಡಿ ಇಚ್ಚಪಾಡಿಯ ಬಿಜಯ್ ಗೆ ಡೆಂಗ್ಯೂ ಜ್ವರವಿರುವುದು ಖಾತ್ರಿಯಾಗಿದೆ. ಮೂಲ್ಕಿಯ ಅತುಲ್ ಕುಮಾರ್(10) ಮತ್ತು ಮೂಡಬಿದಿರೆಯ ಇಬ್ಬರಿಗೆ ಮತ್ತು ಬೆಳ್ತಂಗಡಿಯ ಒಬ್ಬರಲ್ಲೂ ಡೆಂಗ್ಯೂ ರೋಗ ಲಕ್ಷಣ ಕಂಡು ಬಂದಿದೆ.

ಆದರೆ ಆರೋಗ್ಯ ಇಲಾಖೆ ಡೆಂಗ್ಯೂ ಹರಡುತ್ತಿರುವುದನ್ನು ನಿರಾಕರಿಸಿದೆ. ಒಂದೆರಡು ಉದಾಹರಣೆಗಳನ್ನು ಹೊರತು ಪಡಿಸಿ ಉಳಿದವು ಮಲೇರಿಯಾ ಪ್ರಕರಣಗಳು ಎನ್ನುತ್ತಿವೆ. ಮೂಲ್ಕಿ, ಕಿನ್ನಿಗೋಳಿ ಸೇರಿದಂತೆ ಹಲವೆಡೆ ಮಲೇರಿಯವೂ ವ್ಯಾಪಕವಾಗಿ ಹರಡುತ್ತಿದೆ.

ಈ ವರ್ಷ ಇಲ್ಲಿವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದುವರೆ ಸಾವಿರಕ್ಕೂ ಹೆಚ್ಚು ಮಲೇರಿಯಾ ಪೀಡಿತರು ಕಂಡುಬಂದಿದ್ದಾರೆ. ಇದರಲ್ಲಿ ಗರಿಷ್ಠ ಮಂಗಳೂರು ನಗರದಲ್ಲಿಯೇ ಮಲೇರಿಯಾ ಪತ್ತೆಯಾಗಿದೆ. ಸುಳ್ಯದಲ್ಲಿ ಭಾನುವಾರ ಪ್ರಶಾಂತ್(26) ಸಾವನ್ನಪ್ಪಿರುವುದು ಇಲಿ ಜ್ವರದಿಂದ ಎಂದು ಸಂಶಯಿಸಲಾಗಿದೆ.

ಸಲಹೆ: ಮಲೇರಿಯಾದಂತೆ ಡೆಂಗ್ಯೂ ಜ್ವರ ಕೂಡ ಸೊಳ್ಳೆಗಳಿಂದ ಹರಡುತ್ತದೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ತೆಗೆದುಕೊಂಡರೆ ನಾಲ್ಕೈದು ದಿನಗಳಲ್ಲಿ ಚೇತರಿಸಿಕೊಳ್ಳಬಲ್ಲರು. ಇಲ್ಲವಾದಲ್ಲಿ ಕೈಕಾಲು ನೋವು ಹಲವು ತಿಂಗಳ ಕಾಲ ಕಾಡಬಹುದು. ಯಾವುದೇ ಜ್ವರ ಲಕ್ಷಣ ಕಂಡು ಬಂದರೂ ತಕ್ಷಣ ವೈದ್ಯರ ಬಳಿ ಹೋಗಬೇಕು. ಡೆಂಗ್ಯೂ ಪತ್ತೆಯಾದಲ್ಲಿ ಸೂಕ್ತ ಚಿಕಿತ್ಸೆ ಪಡೆದು ಸಂಪೂರ್ಣ ರೆಸ್ಟ್ ತೆಗೆದುಕೊಳ್ಳಬೇಕು.

;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+