8 ಅತ್ಯಾಚಾರ ಮಾಡಿ, ಹೆಸರುಗಳನ್ನೂ ಹಚ್ಚೆ ಹಾಕಿಸಿಕೊಂಡ!

rapist tattooed 8 victims names
ಮುಂಬೈ, ಜೂನ್ 28: ಎಂಟು ಬಾಲಕಿಯರ ಮೇಲೆ ಅತ್ಯಾಚಾರ ಮಾಡಿದ್ದೂ ಅಲ್ಲದೆ ಅವರ ಹೆಸರುಗಳನ್ನೂ ಕೈಮೇಲೆ ಹಚ್ಚೆ ಹಾಕಿಸಿಕೊಂಡ ಪಾಪಿಯ ಕಥೆಯಿದು! ಇವ ಇನ್ನೆಂಥಾ ವಿಕೃತ!

ಕಳೆದ ಗುರುವಾರ ರಾತ್ರಿ ಮಾಲ್ವಾನಿಯಲ್ಲಿ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ 16 ವರ್ಷದ ಬಾಲಕನನ್ನು ಬಂಧಿಸಿದ್ದು ಹಳೆಯ ಸುದ್ದಿ. ಆದರೆ ತಾಜಾ ಸುದ್ದಿ ಏನಪಾ ಅದ್ರೆ, ಈ ಪಾಪಿ ಹುಡುಗ ಇನ್ನೂ ಏಳು ಬಾಲಕಿಯರನ್ನು ಹೀಗೇ ರೇಪ್ ಮಾಡಿದ್ದ. ಅಷ್ಟಕ್ಕೆ ಸಂತೃಪ್ತಿ ಕಾಣದೆ ತನ್ನಿಂದ ಅತ್ಯಾಚಾಕ್ಕೀಡಾದ ಅಷ್ಟೂ ಬಾಲಕಿಯರ ಹೆಸರುಗಳನ್ನು ತನ್ನ ಕೈ ಮೇಲೆ ಹಚ್ಚೆ ಹಾಕಿಸಿಕೊಂಡು ಬರೆಸಿಕೊಂಡಿದ್ದಾನೆ.

ಮಾಲ್ವಾನಿ ಘಟನೆ ವಿವರ: ರಾಥೋಡಿ ಎಂಬ ಗ್ರಾಮದಲ್ಲಿ 7 ವರ್ಷದ ಬಾಲಕಿಯೊಬ್ಬಳು ತನ್ನ ಮನೆ ಸಮೀಪದಲ್ಲಿದ್ದ ಅಂಗಡಿಗೆ ರಾತ್ರಿ ವೇಳೆ ಹೋಗಿದ್ದಾಗ ಈ ಖದೀಮ ಅವಳ ಬಳಿ ಕೆಟ್ಟದ್ದಾಗಿ ನಡೆದುಕೊಂಡಿದ್ದಾನೆ. ಬಾಲಕಿ ಕೂಗಿಕೊಂಡಾಗ ಅವನು ಅನಾಮತ್ತಾಗಿ ಅವಳನ್ನು ಹೊತ್ತೊಯ್ದು, ಮಾಲ್ವಾನಿ ಚರ್ಚ್ ಹಿಂಭಾಗ ಅವಳ ಮೇಲೆ ಎರಡು ಬಾರಿ ಅತ್ಯಾಚಾರ ಎಸಗಿದ್ದಾನೆ.

ತನ್ನ ಕೆಲಸ ಮುಗೀತು ಎಂದು ಅವನು ಜಾಗ ಖಾಲಿ ಮಾಡಿದ್ದಾನೆ. ಆದರೆ ಅಬೋಧ ಬಾಲಕಿ ಅಳುತ್ತಾ ಅವನ ಹಿಂದೆಯೇ ಹೋಗಿದ್ದಾಳೆ. ಇಬ್ಬರೂ ಮನೆ ಸಮೀಪ ಬಂದಾಗ ಬಾಲಕಿಯ ತಾಯಿ ಅದನ್ನು ನೋಡಿ, ಬಾಲಕನನ್ನು ವಿಚಾರಿಸಿದ್ದಾರೆ. ವಿಷಯ ತಿಳಿದ ಗ್ರಾಮಸ್ಥರು ಬಾಲಕನ್ನು ನಾಗಪಾಡ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಾಲಕಿನ್ನು ಆಸ್ಪತ್ರೆಗೆ ಕಳಿಸಿ, ಬಾಲಕನ್ನು ವಿಚಾರಣೆಗೊಳಪಡಿಸಿದಾಗ ಕೈ ಮೇಲಿದ್ದ ಹಚ್ಚೆಗಳನ್ನು ತೋರಿಸುತ್ತಾ ಒಟ್ಟು 8 ಬಾಲಕಿಯರ ಮೇಲೆ ತಾನು ಅತ್ಯಾಚಾರ ಮಾಡಿರುವ ಆಘಾತಕಾರಿ ಸಂಗತಿಯನ್ನು ಹೊರಕಕ್ಕಿದ. ಬಾಲಕ ಈಗ ದೊಂಗ್ರಿ ಬಾಲಾಪರಾಧಿಗಳ ಕೇಂದ್ರದಲ್ಲಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+