ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಪ್ರಧಾನಿ ದೇವೇಗೌಡ ಕೇರಾಫ್ ಫುಟ್ ಪಾತ್

By Mahesh
|
Google Oneindia Kannada News

HD Devegowda
ಬೆಂಗಳೂರು ಜೂ 27: ನಾನು ಕಾನೂನು ಚೌಕಟ್ಟಿನಲ್ಲೇ ನಾನು ಧರಣಿ ನಡೆಸುತ್ತೇನೆ. ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ನಾಲ್ಕು ಜನ ಮಾತ್ರ ಧರಣಿ ಕೂರಲಿದ್ದೇವೆ ಎಂದು ಮಾಜಿ ಪ್ರಧಾನಿಗಳು ಡಿಸಿಪಿ ರಮೇಶ್ ಅವರಲ್ಲಿ ತಾಳ್ಮೆಯಿಂದ ಕೇಳಿಕೊಂಡರೂ ಪೊಲೀಸರ ಮನಕರಗಲಿಲ್ಲ. ಅತ್ತ ಅಶೋಕ ನಗರ ಎಸಿಪಿ ಓಂಕಾರಯ್ಯ ಅವರ ತಂಡ ಎಚ್ ಡಿ ರೇವಣ್ಣ ಹಾಗೂ ಸಂಗಡಿಗರನ್ನು ಬಂಧಿಸಿದ್ದಾರೆ. ಕೊನೆಗೆ ದೇವೇಗೌಡರು ರಸ್ತೆಯಲ್ಲೇ ಧರಣಿ ಕೂತಿದ್ದಾರೆ.

ರೇಸ್ ಕೋರ್ಸ್ ರಸ್ತೆಯಲ್ಲಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಿವಾಸದ ಪಾರ್ಕಿಂಗ್ ಲಾಟ್ ನ ಫುಟ್ ಪಾತ್ ನಲ್ಲಿ ಕುಳಿತಿರುವ ದೇವೇಗೌಡರಿಗೆ ಪುಟ್ಟೇಗೌಡ, ರಾಜ್ಯಸಭಾ ಮಾಜಿ ಸದಸ್ಯ ಜವರೇಗೌಡ, ರಾಮನಗರ ಶಾಸಕ ರಾಜು, ಎಟಿ ರಾಮಸ್ವಾಮಿ ಜೆಡಿಎಸ್ ಶಾಸಕ ಎಚ್ ಡಿ ರೇವಣ್ಣ, ಪಿಜಿಆರ್ ಸಿಂಧ್ಯಾ ಅವರು ಸಾಥ್ ನೀಡಿದ್ದಾರೆ. ಸಿಎಂ ನಿವಾಸದ ಬದಲು ಫ್ರೀಡಂ ಪಾರ್ಕ್ ಅಥವಾ ಎಂಜಿ ರಸ್ತೆ ಗಾಂಧೀಜಿ ಪ್ರತಿಮೆ ಬಳಿ ಬೇಕಾದಷ್ಟು ಸಮಯ ಧರಣಿ ಕುಳಿತುಕೊಳ್ಳಿ, ಯಾರಿಗೂ ತೊಂದರೆಯಾಗುವುದಿಲ್ಲ, ಇಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ ಎಂದು ಹೇಳಿದರೂ ಗೌಡರು ಕೇಳುತ್ತಿಲ್ಲ ಎಂದು ಡಿಸಿಪಿ ರಮೇಶ್ ಹೇಳಿದ್ದಾರೆ.

ಹಾಸನ ಜಿಲ್ಲೆ ಅಭಿವೃದ್ಧಿಯನ್ನು ಕಡೆಗಣಿಸಲಾಗಿದೆ. ಸಿಎಂ ಬಂದು ಲಿಖಿತ ಭರವಸೆ ನೀಡುವವರೆಗೂ ನಾನು ಇಲ್ಲಿಂದ ಕದಲುವುದಿಲ್ಲ. ನಾವೇನು ಇಲ್ಲಿ ಘೋಷಣೆ ಕೂಗಿ, ಗಲಭೆ ಎಬ್ಬಿಸಲು ಬಂದಿಲ್ಲ. ನ್ಯಾಯ ಕೇಳಲು ಬಂದಿದ್ದೇವೆ. ಬಿಜೆಪಿ ಸರ್ಕಾರ, ಹಾಸನ ಜಿಲ್ಲೆಗೆ ಮಾಡಿರುವ ಅನ್ಯಾಯವನ್ನು ಸರಿಪಡಿಸುವ ತನಕ ನನ್ನ ಉಪವಾಸ ಸತ್ಯಾಗ್ರಹ ಮುಂದುವರೆಯಲಿದೆ ಎಂದು ದೇವೇಗೌಡರು ಸ್ಪಷ್ಟಪಡಿಸಿದ್ದಾರೆ.

English summary
Former Prime Minister HD Deve Gowda has been denied to stage a dharna in front of chief minister B S Yeddyurappa's official residence on Race Course road on Monday. Meanwhile Ashok Nagar police arrested HD Revanna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X