ಪುಣೆ ಆಸ್ಪತ್ರೆಯಲ್ಲಿ ಹೈಟೆಕ್ ಮೊಲೆ ಹಾಲು ಬ್ಯಾಂಕ್ ಆರಂಭ

ದೀನನಾಥ ಮಂಗೇಶ್ಕರ್ ಹಾಸ್ಪಿಟಲ್ ಆಂಡ್ ರಿಸರ್ಚ್ ಸೆಂಟರ್ ನಾರಿಮನ್ ಪಾಯಿಂಟ್ ರೋಟರಿ ಕ್ಲಬ್ ಸಹಭಾಗಿತ್ವದಲ್ಲಿ ಮಾನವ ಮೊಲೆ ಹಾಲಿನ ಬ್ಯಾಂಕ್ ಸ್ಥಾಪಿಸಿದ್ದು, ಇದರ ಉದ್ಘಾಟನೆಯನ್ನು ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಜಯಂತ್ ಕುಲಕರ್ಣಿ ಅವರು ಇಂದು (ಜೂ.26) ಸಂಜೆ 4 ಗಂಟೆಗೆ ಉದ್ಘಾಟಿಸಲಿದ್ದಾರೆ.
ಮಗುವಿನ ತಾಯಿ ಅನಾರೋಗ್ಯವಾದ ಸಂದರ್ಭದಲ್ಲಿ ಶಿಶುಗಳ ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ಪಡೆಯುವ ಮಕ್ಕಳಿಗೆ ತಾಯಿಯಂದಿರ ಮೊಲೆ ಹಾಲು ಕುಡಿಯಲು ಸಾಧ್ಯವಾಗುವುದಿಲ್ಲ. ಕೆಲವು ಬಾರಿ ಮಕ್ಕಳ ತಾಯಿಯಂದಿರು ಮಾನಸಿಕ ಒತ್ತಡಕ್ಕೊಳಗಾಗುವುದರಿಂದ ಅವರಲ್ಲಿ ಮೊಲೆ ಹಾಲಿನ ಕೊರತೆ ಕಾಣಿಸುವುದು. ಇಂಥ ಸಂದರ್ಭಗಳಲ್ಲಿ ಸ್ತನ್ಯಪಾನ ಬ್ಯಾಂಕ್ ನೆರವಿಗೆ ಬರಲಿದೆ.
ಆದರೆ ಮೊಲೆ ಹಾಲು ದಾನ ಮಾಡುವ ಮಹಿಳೆಯಲ್ಲಿರುವ ಸೋಂಕು ರೋಗಗಳು ಹರಡದಂತೆ ತಡೆಯಲು ಹಾಲನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು. ಎಚ್‌ಐವಿ ಮತ್ತು ಹೆಪಾಟಿಟಿಸ್-ಬಿ ಸೋಂಕುಗಳನ್ನು ಖಚಿತಪಡಿಸಿಕೊಳ್ಳಲಾಗುವುದು. ಮಗುವಿಗೆ ದಾನಿಯ ಹಾಲುಣಿಸುವ ಮೊದಲು ತಾಯಿಯ ಅನುಮತಿ ಪಡೆಯಲಾಗುವುದು ಎಂದು ಆಸ್ಪತ್ರೆ ಹೇಳಿಕೆ ಹೊರಡಿಸಿದೆ.
ಮೊದಲ ಸ್ತನ್ಯಪಾನ ಬ್ಯಾಂಕ್ ಮುಂಬಯಿಯ ಸಯನ್‌ನಲ್ಲಿ 1989ರ ನವೆಂಬರ್ ನಲ್ಲಿ ಅಮ್ರಿಡಾ ಫೆರ್ನಾಂಡಿಸ್ ಅವರು ಸ್ಥಾಪಿಸಿದ್ದರು. ಅಂದಿನಿಂದ ಸ್ತನ್ಯಪಾನ ಬ್ಯಾಂಕ್‌ಗಳಿಗಾಗಿ ಬೇಡಿಕೆ ಹೆಚ್ಚಾಗುತ್ತಿದೆ. ಸದ್ಯ ಭಾರತದಲ್ಲಿ ಮಕ್ಕಳಿಗೆ ಮೊಲೆ ಹಾಲು ಒದಗಿಸುವ 8 ಬ್ಯಾಂಕ್‌ಗಳಿವೆ. ಬ್ರೆಜಿಲ್, ಫ್ರಾನ್ಸ್, ಜರ್ಮನಿ, ಜಪಾನ್, ಸ್ವಿಜರ್ ಲ್ಯಾಂಡ್, ಇಂಗ್ಲೆಂಡ್, ಅಮೆರಿಕಾ ಮೊದಲಾದ ದೇಶಗಳಲ್ಲಿ ಸ್ತನ್ಯಪಾನ ಬ್ಯಾಂಕ್‌ಗಳು ಜನಪ್ರಿಯವಾಗಿವೆ.
;











Click it and Unblock the Notifications